Select Your Language

Notifications

webdunia
webdunia
webdunia
webdunia

ಪ್ರತಿನಿತ್ಯ ಸೈಕ್ಲಿಂಗ್ ಮಾಡುವುದು ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆಯೇ?

ಪ್ರತಿನಿತ್ಯ ಸೈಕ್ಲಿಂಗ್ ಮಾಡುವುದು ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆಯೇ?
ಬೆಂಗಳೂರು , ಶುಕ್ರವಾರ, 16 ಫೆಬ್ರವರಿ 2018 (06:50 IST)
ಬೆಂಗಳೂರು : ಹವ್ಯಾಸಿಗಳು ಮತ್ತು ಕ್ರೀಡಾಪಟುಗಳು ಮತ್ತು ಮಕ್ಕಳು ತಮ್ಮ ಮೋಜಿಗಾಗಿ ಬಳಸುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಸೈಕಲ್‌ಗಳನ್ನು ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳುವ ಒಂದು ಭಾಗವಾಗಿ ಜನರು ಬಳಸುತ್ತಿದ್ದಾರೆ. ಆದರೆ ಸೈಕಲ್ ಅನ್ನು ಪ್ರತಿನಿತ್ಯ ಬಳಸುವವರ ಸಂತಾನೋತ್ಪತ್ತಿಯ ಮೇಲೆ ಸೈಕ್ಲಿಂಗ್ ಪರಿಣಾಮ ಬೀರುತ್ತದೆ.

 
ವೀರ್ಯಗಳು ಉತ್ಪಾದನೆಯಾಗಲು ಸುಮಾರು 35 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶದ ಅಗತ್ಯವಿರುತ್ತದೆ. ಇದು ದೇಹದ ಸರಾಸರಿ ಉಷ್ಣಾಂಶ ಅಂದರೆ 37 ಡಿಗ್ರಿಗಿಂತ ಕಡಿಮೆ ಇರುತ್ತದೆ. ವೃಷಣ ಚೀಲವು ವೀರ್ಯಗಳ ಉತ್ಪಾದನೆಗೆ ಬೇಕಾದ ಉಷ್ಣಾಂಶವನ್ನು ಒದಗಿಸಲು ಪ್ರಮುಖ ಪಾತ್ರ ನಿರ್ವಹಿಸುತ್ತದೆ.


ಬೇಸಿಗೆ ಮತ್ತು ಉಷ್ಣಾಂಶ ಹೆಚ್ಚಾಗಿರುವ ಸ್ಥಿತಿಗಳಲ್ಲಿ ವೃಷಣಗಳು ಪರಿಸ್ಥಿತಿಗೆ ಅನುಸಾರವಾಗಿ ವೀರ್ಯ ಉತ್ಪಾದನೆಗೆ ಬೇಕಾದ ಉಷ್ಣಾಂಶವನ್ನು ಹೊಂದಾಣಿಕೆ ಮಾಡಿಕೊಳ್ಳಲು ಕೆಳ ಹೊಟ್ಟೆಯ ಭಾಗದಿಂದ ದೂರ ಅಥವಾ ಹತ್ತಿರ ಸರಿಯುತ್ತವೆ. ವೃಷಣ ಚೀಲವು ವೃಷಣಗಳನ್ನು ಉಷ್ಣಾಂಶ ಕಡಿಮೆ ಮಾಡಲು ದೇಹದಿಂದ ದೂರ ಇರಿಸುತ್ತದೆ. ಚಳಿಗಾಲದಲ್ಲಿ ವೃಷಣ ಚೀಲಗಳಲ್ಲಿನ ಸ್ನಾಯುಗಳು ಕುಗ್ಗಿ, ವೃಷಣಗಳನ್ನು ಕೆಳಹೊಟ್ಟೆಯ ಸಮೀಪಕ್ಕೆ ತಳ್ಳುತ್ತವೆ. ಒಂದು ವೇಳೆ ಈ ಉಷ್ಣಾಂಶವನ್ನು ವೃಷಣಗಳು ನಿರ್ವಹಿಸದೆ ಇದ್ದ ಪಕ್ಷದಲ್ಲಿ, ವೀರ್ಯಗಳ ಉತ್ಪಾದನೆಯ (ಸ್ಪರ್ಮಟೊಜೆನಿಸಿಸ್) ಮೇಲೆ ಪರಿಣಾಮ ಉಂಟಾಗುತ್ತದೆ.
ಸೈಕ್ಲಿಂಗ್ ಬಹುಶಃ ವೃಷಣಗಳ ಸ್ವಾಭಾವಿಕ ಸ್ಥಾನಕ್ಕೆ ಧಕ್ಕೆ ತರಬಹುದು. ಏಕೆಂದರೆ ಸೈಕ್ಲಿಂಗ್ ಮಾಡುವಾಗ ವೃಷಣಗಳು ದೇಹದಿಂದ ದೂರ ಸರಿದಿರುತ್ತವೆ. ಇದರಿಂದಾಗಿ ವೃಷಣಗಳಿಗೆ ಬೇಕಾದ ಉಷ್ಣಾಂಶದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವೀರ್ಯಗಳ ಉತ್ಪಾದನೆಯ ಮೇಲೂ ಸಹ ಪ್ರಭಾವ ಬೀರುತ್ತದೆ. 



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಪಲ್‌ ಸೈಡರ್ ವಿನೆಗರ್‌ನ ಉಪಯೋಗಗಳು