Select Your Language

Notifications

webdunia
webdunia
webdunia
webdunia

ಮಹಿಳೆಯರೇ ಈ ಭಾಗದಲ್ಲಿ ತುರಿಕೆ ಉಂಟಾದರೆ ಚಿಂತಿಸಬೇಡಿ. ಇವುಗಳನ್ನು ಬಳಸಿ ನೋಡಿ

ಮಹಿಳೆಯರೇ ಈ ಭಾಗದಲ್ಲಿ  ತುರಿಕೆ ಉಂಟಾದರೆ ಚಿಂತಿಸಬೇಡಿ. ಇವುಗಳನ್ನು ಬಳಸಿ ನೋಡಿ
ಬೆಂಗಳೂರು , ಬುಧವಾರ, 22 ಆಗಸ್ಟ್ 2018 (12:44 IST)
ಬೆಂಗಳೂರು : ಯೋನಿಯಲ್ಲಿ ತುರಿಕೆ ಉಂಟಾದರೆ ಅದರಿಂದ ಮಹಿಳೆಯರು ಸಾಮಾನ್ಯವಾಗಿ ಮುಜುಗರ ಪಡುತ್ತಾರೆ ಹಾಗೂ ಅವರ ಮನಸ್ಸು ಕುಗ್ಗುತ್ತದೆ. ಇದು ಸಾರ್ವಜನಿಕ ಸ್ಥಳದಲ್ಲಿ ಅವರನ್ನು ಚಿಂತೆಗೀಡು ಮಾಡುತ್ತದೆ. ಇದಕ್ಕೆ ಹಣ ವ್ಯಯ ಮಾಡದೇ ಮನೆಯಲ್ಲೇ ಸಿಗುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಬಹುದು.


1. ಮೊಸರು : ಮೊಸರಿನಲ್ಲಿ ಲ್ಯಾಕ್ಟೋಬಾಸಿಲಸ್ ಎಂಬ ಬ್ಯಾಕ್ಟೀರಿಯಾ ಇದ್ದು, ಇದು ತುರಿಕೆಯನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.


-ಮೊಸರನ್ನು ಯೋನಿಯ ಹೊರಭಾಗಕ್ಕೆ ಹಚ್ಚಿ. ಟ್ಯಾಂಪಾಸ್  ಅನ್ನು ಮೊಸರಿನಲ್ಲಿ ಮುಳುಗಿಸಿ ಅದನ್ನು ಯೋನಿಯೊಳಗೆ ಹಾಕಿರಿ. 10 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದು ಶುಭ್ರವಾದ ಬಟ್ಟೆಯಿಂದ ಒರೆಸಿ.


2. ಬೆಳ್ಳುಳ್ಳಿ : ಕುದಿಯುತ್ತಿರುವ  ಒಂದು ಬಟ್ಟಲು ನೀರಿನಲ್ಲಿ ಸ್ವಲ್ಪ ಬೆಳ್ಳುಳ್ಳಿ ಎಸಳನ್ನು ಹಾಕಿ. 10 ನಿಮಿಷದ ನಂತರ ಬೆಳ್ಳುಳ್ಳಿ ತೆಗೆದು ಆ ನೀರನ್ನು ಪಾತ್ರೆಗೆ ಹಾಕಿ ಉಗುರುಬೆಚ್ಚಗಾದ ಮೇಲೆ ಅದರಿಂದ ಯೋನಿಯನ್ನು ತೊಳೆಯಿರಿ.


3. ಕೊಬ್ಬರಿ ಎಣ್ಣೆ : ಹತ್ತಿಯ ಒಂದು ಸಣ್ಣ ಭಾಗದಿಂದ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ತುರಿಕೆ ಇರುವ ಜಾಗದ ಸುತ್ತ ಹಚ್ಚಿರಿ.
30 ನಿಮಿಷಗಳ ಕಾಲ ಹಾಗೆ ಬಿಡಿ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದು ಶುಭ್ರವಾದ ಬಟ್ಟೆಯಿಂದ ಒರೆಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ದಿನ ವಧುವಿನ ಬಳಿ ಹೇಳಲೇಬಾರದ ಆ ಮೂರು ವಿಚಾರಗಳು!