Select Your Language

Notifications

webdunia
webdunia
webdunia
webdunia

ಬಹಳ ಉಪಯೋಗಕಾರಿಯಾದ ತೆಂಗಿನ ಎಣ್ಣೆಯನ್ನು ಇವುಗಳಿಗೆ ಮಾತ್ರ ಬಳಸಬೇಡಿ

ಬಹಳ ಉಪಯೋಗಕಾರಿಯಾದ ತೆಂಗಿನ ಎಣ್ಣೆಯನ್ನು ಇವುಗಳಿಗೆ ಮಾತ್ರ ಬಳಸಬೇಡಿ
ಬೆಂಗಳೂರು , ಮಂಗಳವಾರ, 11 ಸೆಪ್ಟಂಬರ್ 2018 (10:43 IST)
ಬೆಂಗಳೂರು : ಸಾಮಾನ್ಯವಾಗಿ ತೆಂಗಿನ ಎಣ್ಣೆ ಬಹಳ ಉಪಯೋಗಕಾರಿಯಾಗಿರುವಂತಹದು. ಆದರೆ ತೆಂಗಿನ ಎಣ್ಣೆಯನ್ನು ಎಲ್ಲದಕ್ಕೂ ಬಳಸಲು ಸಾಧ್ಯವಿಲ್ಲ. ಕೆಲ ಸಂದರ್ಭಗಳಲ್ಲಿ ನಾವು ತೆಂಗಿನಎಣ್ಣೆಯನ್ನು ಬಳಸಬಾರದು.ಇದರಿಂದ ಅನುಕೂಲಕ್ಕಿಂತ ಅನಾನುಕೂಲಗಳೆ ಹೆಚ್ಚು.


ತೆರೆದ ಗಾಯಗಳಿಗೆ : ಸಣ್ಣ ಪುಟ್ಟ ಗಾಯಗಳಿಗೆ ಹಾಗೂ ಸುಟ್ಟ ಗಾಯಗಳಿಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಇನ್ನಷ್ಟು ಕಿರಿಕಿರಿ ಉಂಟಾಗುತ್ತದೆ. ಅಷ್ಟೇ ಅಲ್ಲದೆ ಗಾಯದ ಸುತ್ತ ಕೆಂಪಗಾಗುತ್ತದೆ.


ಬಾಯಿಯಲ್ಲಿ ತೆಂಗಿನಎಣ್ಣೆ ತುಂಬುವುದು : ಹಿಂದಿನ ಕಾಲದಲ್ಲಿ ಬಾಯಲ್ಲಿ ಎಣ್ಣೆ ಹಾಕಿ ಉಗುಳುವುದರಿಂದ ಹಲ್ಲು ಆರೋಗ್ಯಯುತವಾಗಿರುತ್ತದೆ ಎಂಬ ಮಾತಿತ್ತು. ಆದರೆ ಈಗ ದಂತ ವೈದ್ಯರ ಪ್ರಕಾರ ಈ ಪ್ರಯೋಗ ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ.

ಸ್ನಾನಕ್ಕೆ : ಮೈಗೆ ಎಣ್ಣೆ ಹಚ್ಚುವುದರಿಂದ ನಿಮ್ಮ ಚರ್ಮ ನಯವಾಗಬಹುದು ಆದರೆ ಸ್ನಾನಕ್ಕೆ ಎಣ್ಣೆ ಬಳಸುವುದರಿಂದ ಹೆಚ್ಚು ಜಿಡ್ಡನ್ನುಂಟುಮಾಡಬಹುದು. ಅಷ್ಟೇ ಅಲ್ಲದೆ ಬಾತ್‍ರೂಮ್‍ನಲ್ಲಿ ಎಣ್ಣೆ ಅಂಶ ನೆಲದಲ್ಲಿ ನಿದ್ದಿರುವುದರಿಂದ ಕಾಲು ಜಾರಿಬೀಳುವ ಸಾಧ್ಯತೆ ಹೆಚ್ಚು.

ಸಂಸ್ಕರಿಸದ ತೆಂಗಿನಎಣ್ಣೆಯಲ್ಲಿ ಡೀಪ್ ಫ್ರೈ ಮಾಡುವುದು : ಸಂಸ್ಕರಿಸದ ತೆಂಗಿನಎಣ್ಣೆಯಲ್ಲಿ ಹೊಗೆ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ಅದನ್ನು ಆಹಾರವನ್ನು ಕರಿಯಲು ಬಳಸಬಾರದು. ಸಂಸ್ಕರಿಸಿದ ತೆಂಗಿನ ಎಣ್ಣೆಯಲ್ಲಿ ಹೊಗೆ ಪ್ರಮಾಣ ಅಧಿಕವಿರುವುದರಿಂದ ಅದು ಆಹಾರ ಕರಿಯಲು ಸೂಕ್ತವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ರಾತ್ರಿ ದಿನ ಹೆಣ್ಣು ಪತಿಯಿಂದ ಬಯಸುವುದು ಏನನ್ನು?