Select Your Language

Notifications

webdunia
webdunia
webdunia
webdunia

ಬೆಳಗಿನ ಸಮಯದಲ್ಲಿ ಬಿಸಿ ನೀರಿನ ಸೇವನೆಯಿಂದಾಗುವ ಆರೋಗ್ಯಕರ ಲಾಭಗಳು

ಬೆಳಗಿನ ಸಮಯದಲ್ಲಿ ಬಿಸಿ ನೀರಿನ ಸೇವನೆಯಿಂದಾಗುವ ಆರೋಗ್ಯಕರ ಲಾಭಗಳು
ಬೆಂಗಳೂರು , ಬುಧವಾರ, 24 ಅಕ್ಟೋಬರ್ 2018 (17:12 IST)
ನೀರು ಜೀವಸೆಲೆ. ಇದು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ನೀರು ಒಂದು ಅವಿಭಾಜ್ಯವೇ ಸರಿ. ಆಹಾರವಿಲ್ಲದೇ ಕೆಲಕಾಲ ಬದುಕಿದರೂ ನೀರಿಲ್ಲದೇ ಬಹಳ ಕಾಲ ಬದುಕಲಾರ. ದೇಹದಲ್ಲಿ ಹೆಚ್ಚು ನೀರಿದ್ದಷ್ಟೂ ಆರೋಗ್ಯವು ಬಲವಾಗಿರುತ್ತದೆ. ಆದರೆ ಬೆಳಿಗ್ಗೆಯ ಸಮಯದಲಲ್ಲಿ ತಣ್ಣನೆಯ ನೀರಿನ ಸೇವನೆಗಿಂತ ಬಿಸಿನೀರಿನ ಸೇವನೆಯಿಂದ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು. 
* ತೂಕ ನಷ್ಟಕ್ಕೆ ಬಿಸಿ ನೀರು ಒಂದು ಉತ್ತಮ ಪರಿಹಾರವಾಗಿದೆ. ಬೆಳಗಿನ ಸಮಯ ಬಿಸಿ ನೀರನ್ನು ಕುಡಿಯುವುದರಿಂದ ದೇಹದ ಹೆಚ್ಚುವರಿ ತೂಕವು ಕಡಿಮೆಯಾಗುತ್ತದೆ. 
 
* ಬಿಸಿ ನೀರಿನ ಸೇವನೆಯಿಂದಾಗಿ ದೇಹದಲ್ಲಿ ಉಷ್ಣಾಂಶವು ಸ್ವಲ್ಪ ಹೆಚ್ಚಾಗಿ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಹಾಕಲು ಇದು ಸಹಾಯ ಮಾಡುತ್ತದೆ. 
 
* ರಕ್ತವನ್ನು ಶುದ್ಧೀಕರಿಸಲು ಬಿಸಿನೀರಿನ ಸೇವನೆ ಅತ್ಯುತ್ತಮದ್ದಾಗಿದೆ. 
 
*  ನೆಗಡಿಯಾಗಿ, ಗಂಟಲಲ್ಲಿ ಕಫ ಕಟ್ಟಿದ್ದರೆ ಬೆಳ್ಳಂಬೆಳಿಗ್ಗೆ ಬಿಸಿ ನೀರನ್ನು ಸೇವಿಸುವುದರಿಂದ ಕಫವು ಸಡಿಲವಾಗಿ ನೆಗಡಿಯು ಕಡಿಮೆಯಾಗುತ್ತದೆ. 
 
* ಬಿಸಿನೀರಿನೊಂದಿಗೆ ಜೇನು ಮತ್ತು ನಿಂಬೆರಸವನ್ನು ಬೆರೆಸಿ ಕುಡಿದರೆ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ.
 
* ಬೆಳಿಗ್ಗೆ ಬಿಸಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯು ಸರಾಗವಾಗುತ್ತದೆ.
 
* ಬಿಸಿ ನೀರನ್ನು ಕುಡಿಯುವುದರಿಂದ ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸುಲಭವಾಗುತ್ತದೆ.
 
* ಬೆಳ್ಳಂಬೆಳಿಗ್ಗೆ ಬಿಸಿ ನೀರನ್ನು ಕುಡಿಯುವುದರಿಂದ ಹೊಳೆಯುವ, ನುಣುಪಾದ ಚರ್ಮವು ನಿಮ್ಮದಾಗುತ್ತದೆ.
 
* ಬಿಸಿ ನೀರು ಕುಡಿಯುವುದರಿಂದ ಶರೀರ ಶುದ್ಧವಾಗುತ್ತದೆ. ಉಷ್ಣದಿಂದ ಬೆವರು ಹರಿಯುವುದರಿಂದ ಶರೀರದ ಮಲಿನವೆಲ್ಲವೂ ಹೋಗುವುದರಿಂದ ಶರೀರವು ಶುದ್ಧಿಯಾಗುತ್ತದೆ.
 
* ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಬಿಸಿ ನೀರನ್ನು ಕುಡಿಯುವುದರಿಂದ ಋತುಸ್ರಾವದ ನೋವು ಶಮನವಾಗುವುದಲ್ಲದೇ ಮುಟ್ಟಿನ ಸಳೆತವೂ ಕೂಡಾ ಕಡಿಮೆಯಾಗುತ್ತದೆ.
 
* ಬಿಸಿಯಾದ ನೀರು ನರಮಂಡಲವನ್ನು ಶುದ್ಧಿಗೊಳಿಸುವುದಲ್ಲದೇ ಮೆದುಳು ಮತ್ತು ಮನಸ್ಸು ಚೈತನ್ಯದಿಂದಿರುವಂತೆ ನೋಡಿಕೊಳ್ಳುತ್ತದೆ.
 
* ಬೆಳಗಿನ ಹೊತ್ತು ಬಿಸಿನೀರು ಕುಡಿಯುವುದರಿಂದ ಕರುಳಿನ ಕ್ರಿಯೆಗಳು ಸರಾಗವಾಗಿ ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ.
 
* ಬಿಸಿನೀರು ಆಹಾರದಲ್ಲಿರುವ ಕೊಬ್ಬನ್ನು ಬಲುಬೇಗ ಘನವಾಗಿ ಕರಗುವಂತೆ ಮಾಡುತ್ತದೆ.
 
* ಬೆಳಿಗ್ಗೆ ಎದ್ದಾಗ ಬಿಸಿನೀರನ್ನು ಕುಡಿಯುವುದರಿಂದ ಚೆನ್ನಾಗಿ ಹಸಿವೆ ಆಗುತ್ತದೆ.
 
* ಮುಂಜಾನೆಯ ವೇಳೆ ಬಿಸಿನೀರನ್ನು ಸೇವಿಸುವುದರಿಂದ ಅಸಿಡಿಟಿಯಂತಹ ಸಮಸ್ಯೆಗಳು ತಲೆದೋರುವುದಿಲ್ಲ.
 
* ಪ್ರಾತಃಕಾಲ ಬಿಸಿನೀರನ್ನು ಸೇವಿಸುವುದರಿಂದ ನರಗಳು, ಮಾಂಸಖಂಡಗಳು ವೇಗವಾಗಿ ಕೆಲಸ ಮಾಡುವುದಲ್ಲದೇ ನರಗಳು ಕ್ರಿಯಾಶೀಲವಾಗಿರುತ್ತದೆ.
 
* ಬೆಳಿಗ್ಗೆ ಬಿಸಿನೀರನ್ನು ಸೇವಿಸುವುದರಿಂದ ಕಟ್ಟಿದ ಮೂಗು, ಗಂಟಲಿನ ಕಿರಿಕಿರಿ ಮತ್ತು ಸೈನಸ್‌ನಿಂದ ಉಂಟಾಗುವ ತಲೆನೋವುಗಳೆಲ್ಲವೂ ನಿವಾರಣೆಯಾಗುತ್ತದೆ.
 
* ಆಹಾರ ಸೇವನೆಯ ನಂತರ ಗಂಟಲಲ್ಲಿ ಎಣ್ಣೆ ಅಥವಾ ಜಿಡ್ಡಿನ ಪದಾರ್ಥಗಳಿದ್ದರೆ ಬಿಸಿನೀರನ್ನು ಕುಡಿಯುವುದು ಉತ್ತಮ.
 
* ಗಂಟಲು ನೋವಿನಿಂದ ಬಳಲುತ್ತಿದ್ದರೆ ಬೆಳಿಗ್ಗೆ ಎದ್ದಾಗ ಬಿಸಿನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಗಾರ್ಗ್ಲಿಂಗ್ ಮಾಡಿದರೆ ಗಂಟಲುನೋವು ಶಮನವಾಗುತ್ತದೆ.
 
* ಪ್ರತಿದಿನ ಎದ್ದಾಗ ಬಿಸಿನೀರನ್ನು ಕುಡಿದಾಗ ದೇಹವು ತನ್ನಿಂದ ತಾನೇ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಇದರಿಂದ ಕಿಡ್ನಿಗೆ ಒಳ್ಳೆಯದು.
 
* ಬೆಳಿಗ್ಗೆ ಬಿಸಿನೀರನ್ನು ಕುಡಿಯುವುದರಿಂದ ನ್ಯೂಮೋನಿಯಾದಂತಹ ರೋಗಗಳು ಬರದಂತೆ ತಡೆಗಟ್ಟಬಹುದು.
 
* ಬಿಸಿನೀರನ್ನು ಕುಡಿಯುವುದರಿಂದ ಚರ್ಮದ ಸ್ಥಿತಿಸ್ಥಾಪಕತ್ವವು ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ಹಾನಿಗೊಳಗಾದ ಚರ್ಮವು ಸುಕ್ಕುಗಟ್ಟುವಿಕೆಯಿಂದ ಮುಕ್ತಿ ಹೊಂದುತ್ತದೆ.
 
* ನೆಗಡಿಯಾದಾಗ ಬಿಸಿನೀರಿಗೆ ಸ್ವಲ್ಪ ವಿಕ್ಸ್, ಅರಿಶಿನ ಅಥವಾ ಬೇವಿನ ಎಲೆಗಳನ್ನು ಹಾಕಿ ನೀರಾವಿಯನ್ನು ತೆಗೆದುಕೊಂಡರೆ ನೆಗಡಿ ಬಲುಬೇಗ ಶಮನವಾಗುತ್ತದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೋಟೀನ್ ದೋಸಾ