Select Your Language

Notifications

webdunia
webdunia
webdunia
webdunia

ಗ್ಯಾನವಾಪಿ ಮಸೀದಿ ಸಮೀಕ್ಷೆ ಅಂತ್ಯ, ಬಾವಿಯಲ್ಲಿ ಶಿವಲಿಂಗ ಪತ್ತೆ

ಗ್ಯಾನವಾಪಿ ಮಸೀದಿ ಸಮೀಕ್ಷೆ  ಅಂತ್ಯ, ಬಾವಿಯಲ್ಲಿ ಶಿವಲಿಂಗ ಪತ್ತೆ
ನವದೆಹಲಿ , ಸೋಮವಾರ, 16 ಮೇ 2022 (11:52 IST)
ನವದೆಹಲಿ: ಗ್ಯಾನವ್ಯಾಪಿ ಮಸೀದಿಯೊಳಗೆ ವಿಡಿಯೋ ಸಮೇತ ಸರ್ವೇ ಕಾರ್ಯ ಅಂತ್ಯಗೊಂಡಿದ್ದು, ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಅರ್ಜಿದಾರರ ಪರ ವಕೀಲ ಹೇಳಿದ್ದಾರೆ.
 
ಕೋರ್ಟ್‌ ಗ್ಯಾನವ್ಯಾಪಿ ಮಸೀದಿಯಲ್ಲಿ ವಿಡಿಯೋ ಸರ್ವೇ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಮಂಗಳವಾರ ಸರ್ವೇ ವರದಿಯನ್ನು ಕೋರ್ಟ್‌ಗೆ ಸಲ್ಲಿಸುವಂತೆ ಆದೇಶಿಸಿತ್ತು. ಇದರ ಬೆನ್ನಲ್ಲೇ ಸರ್ಕಾರಿ ಅಧಿಕಾರಿಗಳ ತಂಡ ಸರ್ವೇ ಕಾರ್ಯ ಮಾಡಿದ್ದು, ಇಂದು ಅದು ಅಂತ್ಯಗೊಂಡಿದೆ ಎಂದು ವಕೀಲ ವಿಷ್ಣು ಜೈನ್‌ ಮಾಹಿತಿ ನೀಡಿದ್ದಾರೆ. ಜತೆಗೆ ಸಿವಿಲ್‌ ಕೋರ್ಟ್‌ಗೆ ಈ ಬಗ್ಗೆ ಮಾಹಿತಿ ನೀಡಿ, ಬಾವಿಯಲ್ಲಿ ಸಿಕ್ಕ ಶಿವಲಿಂಗಕ್ಕೆ ಸುರಕ್ಷತೆ ನೀಡುವಂತೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. 
 
ಅಲಹಾಬಾದ್‌ ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಭಾರೀ ಸುರಕ್ಷತೆಯೊಂದಿಗೆ ಕೋರ್ಟ್‌ ನೇಮಿಸಿದ ಸಮಿತಿ ಸರ್ವೇ ಕಾರ್ಯ ಆರಂಭಿಸಿತ್ತು. ವಕೀಲ ಹರಿಶಂಕರ್‌ ಜೈನ್‌ ಮತ್ತು ವಿಷ್ಣು ಜೈನ್‌ ಅವರ ಪ್ರಕಾರ ಭಾನುವಾರ ಮಸೀದಿಯ ಒಳ ಪ್ರದೇಶದಲ್ಲಿ ದೇವಸ್ಥಾನವಿತ್ತು ಎನ್ನಲಾದ ಜಾಗದ ಸರ್ವೇ ಮಾಡಲಾಗಿದೆ. 
ಗ್ಯಾನವ್ಯಾಪಿ ಮಸೀದಿಯ ಪಶ್ಚಿಮ ಭಾಗದ ಬಾಗದಲ್ಲಿ ಹಿಂದೂ ದೇವಾಲಯವನ್ನು ಕೆಡವಿರುವ ಕುರುಹುಗಳಿವೆ ಎನ್ನಲಾಗಿದ್ದು ಅದರ ಫೋಟೊ ಕೂಡ ವೈರಲ್‌ ಆಗಿತ್ತು. ಉಳಿದ ಮೂರು ದಿಕ್ಕುಗಳ ಸರ್ವೇ ಶನಿವಾರವೇ ಅಂತ್ಯವಾಗಿತ್ತು ಮತ್ತು ಪಶ್ಚಿಮ ದಿಕ್ಕಿನ ಬಾಗಿಲನ್ನು ತೆರೆಸಿ ಭಾನುವಾರ ಸರ್ವೇ ಮಾಡಲಾಗಿದೆ. 
 
ಕಾಶಿ ವಿಶ್ವನಾಥ ಮಂದಿರದ ಭಾಗವನ್ನು ಕೆಡವಿ ಅಂದಿನ ಮುಘಲ್‌ ದೊರೆ ಔರಂಗಜೇಬ್‌ ಗ್ಯಾನವಾಪಿ ಮಸೀದಿ ಕಟ್ಟಿಸಿದ್ದ. ಈ ಮಸೀದಿಯಲ್ಲಿ ಶೃಂಗಾರ ಗೌರಿ, ಗಣೇಶ ಸೇರಿ ಅನೇಕ ದೇವರ ವಿಗ್ರಹಗಳಿವೆ. ಅವುಗಳ ಪೂಜೆಗೆ ಅವಕಾಶ ನೀಡಬೇಕು ಎಂಬ ಅರ್ಜಿ ವಾರಾಣಸಿ ಕೋರ್ಚ್‌ ಮುಂದಿದೆ. ಆದರೆ ಮಸೀದಿಯನ್ನು ಅನ್ಯಧರ್ಮದ ಚಟುವಟಿಕೆಗೆ ನೀಡುವುದು ಮಸೀದಿ ಕಮಿಟಿಗೆ ಇಷ್ಟವಿಲ್ಲ. ಇದು ವಿವಾದದ ಮೂಲ. ಆದರೆ, ಮಸೀದಿಯಲ್ಲಿ ನಿಜಕ್ಕೂ ಹಿಂದೂ ವಿಗ್ರಹಗಳು ಹಾಗೂ ಮಂದಿರದ ವಿನ್ಯಾಸಗಳು ಇವೆಯೇ ಎಂಬುದರ ಪತ್ತೆಗಾಗಿ ವಿಡಿಯೋ ಸಮೀಕ್ಷೆಗೆ ಕೋರ್ಚ್‌ ಆದೇಶಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನನ್ನು ಕೊಲೆ ಮಾಡಿದ ಪತ್ನಿ, ಲವ್ವರ್ ಅರೆಸ್ಟ್