Select Your Language

Notifications

webdunia
webdunia
webdunia
webdunia

ರಾಹುಲ್ ದ್ರಾವಿಡ್ ಹುಡುಗರ ನೋಡಿ ಕೊಹ್ಲಿಗೆ ಗಂಗೂಲಿ ಹೇಳಿದ್ದೇನು ಗೊತ್ತಾ?!

ರಾಹುಲ್ ದ್ರಾವಿಡ್ ಹುಡುಗರ ನೋಡಿ ಕೊಹ್ಲಿಗೆ ಗಂಗೂಲಿ ಹೇಳಿದ್ದೇನು ಗೊತ್ತಾ?!
ಮುಂಬೈ , ಸೋಮವಾರ, 15 ಜನವರಿ 2018 (08:51 IST)
ಮುಂಬೈ: ಟೀಂ ಇಂಡಿಯಾ ದ.ಆಫ್ರಿಕಾದಲ್ಲಿ ಮಾನ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ ಅತ್ತ ರಾಹುಲ್ ದ್ರಾವಿಡ್ ತರಬೇತಿಯಲ್ಲಿ ಸಿದ್ಧಗೊಂಡಿರುವ ಭಾರತ ಎ ತಂಡ ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ.
 

ಇದೀಗ ಭಾರತದ ಮಾಜಿ ಕ್ರಿಕೆಟಿಗರು ಎ ತಂಡದ ಪ್ರದರ್ಶನಕ್ಕೆ ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ನಾಯಕ ಸೌರವ್ ಗಂಗೂಲಿ ಅಂತೂ ಯುವ ತಂಡದ ಮೂವರು ವೇಗಿಗಳು ಸದ್ಯದಲ್ಲೇ ನಿಮ್ಮ ಬಳಗಕ್ಕೆ ಸೇರುತ್ತಾರೆ ನೋಡುತ್ತಿರಿ ಎಂದು ಕೊಹ್ಲಿಗೆ ಟ್ವೀಟ್ ಮಾಡಿದ್ದಾರೆ.

ಕೊಹ್ಲಿ, ಸಚಿನ್ ಮತ್ತು ವಿವಿಎಸ್ ಲಕ್ಷ್ಮಣ್ ಗೆ ಟ್ವೀಟ್ ಟ್ಯಾಗ್ ಮಾಡಿರುವ ಗಂಗೂಲಿ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಎ ತಂಡದ ಶಿವಂ ಮಾವಿ, ಕಮಲೇಶ್ ನಗರ್ ಕೋಟಿ ಮತ್ತು ಇಶಾನ್ ಪೊರೆಲ್ ಸದ್ಯದಲ್ಲೇ ಟೀಂ ಇಂಡಿಯಾಕ್ಕೆ ಸೇರುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಭಾರತ ಎ ತಂಡ ವಿಶ್ವಕಪ್ ನ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ 100 ರನ್ ಗಳ ಗೆಲುವು ದಾಖಲಿಸಿತ್ತು. ನ್ಯೂಜಿಲೆಂಡ್ ನ ವೇಗದ ಪಿಚ್ ನಲ್ಲಿ 145 ಕಿ.ಮೀ. ವೇಗದಲ್ಲಿ ಬಾಲ್ ಮಾಡಿದ ಯುವ ವೇಗಿಗಳನ್ನು ಗಂಗೂಲಿ ಮುಕ್ತ ಕಂಠದಿಂದ ಹೊಗಳಿದ್ದಾರೆ. ಮಾಜಿ ಕ್ರಿಕೆಟಿಗ ಸೆಹ್ವಾಗ್ ಕೂಡಾ ಈ ಯುವ ವೇಗಿಗಳ ಪ್ರದರ್ಶನವನ್ನು ಕೊಂಡಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿರೀಕ್ಷೆಯ ಬಲೂನ್ ಠುಸ್ ಮಾಡಿದ ಕೆಎಲ್ ರಾಹುಲ್!