Select Your Language

Notifications

webdunia
webdunia
webdunia
webdunia

ಪ್ರಾಕ್ಟೀಸ್ ಮಾಡುವುದು ಬಿಟ್ಟು ಕುಟುಂಬದವರ ಜತೆ ಸುತ್ತಾಡುವುದರಲ್ಲೇ ಕೊಹ್ಲಿ, ಧವನ್ ಬ್ಯುಸಿ!

ಪ್ರಾಕ್ಟೀಸ್ ಮಾಡುವುದು ಬಿಟ್ಟು ಕುಟುಂಬದವರ ಜತೆ ಸುತ್ತಾಡುವುದರಲ್ಲೇ ಕೊಹ್ಲಿ, ಧವನ್ ಬ್ಯುಸಿ!
ಕೇಪ್ ಟೌನ್ , ಶುಕ್ರವಾರ, 5 ಜನವರಿ 2018 (09:00 IST)
ಕೇಪ್ ಟೌನ್: ದ. ಆಫ್ರಿಕಾಕ್ಕೆ ವಿರಾಟ್ ಕೊಹ್ಲಿ ಮತ್ತು ಬಳಗ ಕ್ರಿಕೆಟ್ ಆಡಲು ಹೋಗಿದೆಯೋ ಅಥವಾ ಫ್ಯಾಮಿಲಿ ಟೂರ್ ಗೆ ಹೋಗಿದೆಯೋ ಎಂದು ಸಂಶಯ ಮೂಡಿದೆ ಕ್ರಿಕೆಟಿಗರ ಸುತ್ತಾಟ.
 

ಅಭ್ಯಾಸ ಮಾಡುತ್ತಾ ಮೈದಾನದಲ್ಲಿ ಕಾಣಿಸಿಕೊಳ್ಳುವುದಕ್ಕಿಂತಲೂ ಹೆಚ್ಚು ಕೊಹ್ಲಿ ಮತ್ತು ಬಳಗ ಶಾಪಿಂಗ್ ಮಾಲ್, ಬೀದಿಯಲ್ಲಿ ನೃತ್ಯ ಮಾಡುವುದು, ಪ್ರವಾಸಿ ತಾಣಗಳಲ್ಲಿ ಕಾಣಿಸಿಕೊಳ್ಳುವ ಫೋಟೋಗಳನ್ನೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಾರೆ. ಹೆಚ್ಚಿನ ಸಮಯವನ್ನು ಫ್ಯಾಮಿಲಿ ಜತೆ ಕಳೆಯುತ್ತಿರುವವರಲ್ಲಿ ನಾಯಕ ವಿರಾಟ್ ಕೊಹ್ಲಿಯದ್ದೇ ಮೇಲುಗೈ.

ಇವರ ಜತೆಗೆ ಶಿಖರ್ ಧವನ್ ಕೂಡಾ ತಮ್ಮ ಸಂಸಾರ ಸಮೇತ ಸೇರಿಕೊಂಡಿದ್ದಾರೆ. ಕೇಪ್ ಟೌನ್ ನ ಸುಂದರ ತಾಣದಲ್ಲಿ ಕೊಹ್ಲಿ, ಅನುಷ್ಕಾ ಜತೆಗೆ ತಮ್ಮ ಸಂಸಾರ ಸಮೇತ ಫೋಟೋ ಪ್ರಕಟಿಸಿರುವ ಶಿಖರ್ ಧವನ್ ಗೆ ಅಭಿಮಾನಿಗಳು ‘ಬಾಯ್.. ಕ್ರಿಕೆಟ್ ಯಾವಾಗ ಆಡುತ್ತೀರಾ?’ ಎಂದು ಪ್ರಶ್ನಿಸಿದ್ದಾರೆ.

ಇದೇ ರೀತಿ ಹಲವರು ಕ್ರಿಕೆಟಿಗರ ಸುತ್ತಾಟ ನೋಡಿ ಬೇಸತ್ತು ಕ್ರಿಕೆಟ್ ಕಡೆಗೆ ಹೆಚ್ಚು ಗಮನ ಕೊಡುವಂತೆ ಕಾಮೆಂಟ್ ಮಾಡಿದ್ದಾರೆ. ತವರಿನ ಸರಣಿಗಳ ಯಶಸ್ಸಿನಲ್ಲಿ ಮೈಮರೆತಿರುವ ಭಾರತಕ್ಕೆ ಬಹುಶಃ ಮೊದಲ ಟೆಸ್ಟ್ ನಲ್ಲಿ ವೇಗದ ಬಿಸಿ ಚೆಂಡು ಎದುರಿಸುವವರೆಗೂ ಗಾಂಭೀರ್ಯ ಬರುವ ಸೂಚನೆ ಕಾಣುತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಯ ಭಾರೀ ಸಂಭಾವನೆಗೆ ಕತ್ತರಿ ಹಾಕುತ್ತಾ ಬಿಸಿಸಿಐ?