Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಅನುಷ್ಕಾ ಮದುವೆ ಸುದ್ದಿ ಈ ಬಾರಿಯೂ ಟುಸ್?!

ವಿರಾಟ್ ಕೊಹ್ಲಿ ಅನುಷ್ಕಾ ಮದುವೆ ಸುದ್ದಿ ಈ ಬಾರಿಯೂ ಟುಸ್?!
ಮುಂಬೈ , ಗುರುವಾರ, 7 ಡಿಸೆಂಬರ್ 2017 (08:18 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಜತೆ ಮುಂದಿನ ವಾರ ಇಟೆಲಿಯಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ ಈ ಬಾರಿಯೂ ಆ ಸುದ್ದಿ ಟುಸ್ ಎನ್ನಲಾಗುತ್ತಿದೆ.
 

ಹಲವು ಬಾರಿ ಈ ಪ್ರೇಮಿಗಳ ಮದುವೆ ಸುದ್ದಿ ಹರಿದಾಡಿ ಕೊನೆಗೆ ಕೊಹ್ಲಿ ಅಥವಾ ಅನುಷ್ಕಾ ಸ್ಪಷ್ಟನೆ ನೀಡಿ ಮದುವೆ ಸದ್ಯಕ್ಕಿಲ್ಲ ಎನ್ನುವುದರೊಂದಿಗೆ ತೆರೆ ಬೀಳುತ್ತಿತ್ತು. ಕೆಲವು ದಿನಗಳ ಹಿಂದೆಯೂ ಇದೇ ರೀತಿ ಆಗಿತ್ತು.

ಆದರೆ ನಿನ್ನೆ ಇದ್ದಕ್ಕಿದ್ದಂತೆ ಅವರಿಬ್ಬರೂ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದ ಬೆನ್ನಲ್ಲೇ ಅನುಷ್ಕಾ ಶರ್ಮಾ ವ್ಯವಸ್ಥಾಪಕರು ಸ್ಪಷ್ಟನೆ ನೀಡಿದ್ದು, ಇದೆಲ್ಲಾ ಸುಳ್ಳು ಸುದ್ದಿ ಎಂದಿದ್ದಾರೆ. ಅನುಷ್ಕಾ ಇಟೆಲಿಗೆ ತೆರಳಿದ್ದಾರೆ ಎಂಬದು ಸುಳ್ಳು. ಅವರು ಈಗಲೂ ಮುಂಬೈಯಲ್ಲೇ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೆ ಇವರಿಬ್ಬರೇ ಸ್ಪಷ್ಟನೆ ಕೊಡುವವರೆಗೂ ಈ ಸುದ್ದಿ ಚಾಲ್ತಿಯಲ್ಲಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಟಲಿಯಲ್ಲಿ ಮುಂದಿನ ವಾರ ವಿರಾಟ್- ಅನುಷ್ಕಾ ವಿವಾಹ