Select Your Language

Notifications

webdunia
webdunia
webdunia
webdunia

ವೀರೇಂದ್ರ ಸೆಹ್ವಾಗ್ ಕ್ರೀಸ್ ನಲ್ಲಿದ್ದಾಗ ಇವರಿಗೆ ನಡುಕ ಹುಟ್ಟುತ್ತಿಂತೆ

ವೀರೇಂದ್ರ ಸೆಹ್ವಾಗ್ ಕ್ರೀಸ್ ನಲ್ಲಿದ್ದಾಗ ಇವರಿಗೆ ನಡುಕ ಹುಟ್ಟುತ್ತಿಂತೆ
Karachi , ಮಂಗಳವಾರ, 13 ಡಿಸೆಂಬರ್ 2016 (16:06 IST)
ಕರಾಚಿ: ವೀರೇಂದ್ರ ಸೆಹ್ವಾಗ್ ಅಂದರೆ ಹಾಗೇ. ಅವರು ಯಾವ ಬೌಲ್ ನ್ನು ಯಾವ ರೀತಿ ಚಚ್ಚುತ್ತಾರೆ ಎಂಬುದನ್ನು ಊಹೆ ಮಾಡಲೂ ಸಾಧ್ಯವಿಲ್ಲ. ಅಂತಹ ಪ್ರಳಯಾಂತಕ. ಅವರು ಕ್ರೀಸ್ ನಲ್ಲಿದ್ದಾಗ ಈ ಎದುರಾಳಿ ನಾಯಕನಿಗೆ ನಡುಕ ಹುಟ್ಟುತ್ತಿಂತೆ.

ಅವರೇ ಪಾಕಿಸ್ತಾನದ ಯಶಸ್ವೀ ನಾಯಕ ಇಂಜಮಾಮ್ ಉಲ್ ಹಕ್. “ಸೆಹ್ವಾಗ್ ನಷ್ಟು ತಲೆ ತಿಂದವರು ಯಾರೂ ಇಲ್ಲ. ಆತನಂತಹ ಬ್ಯಾಟ್ಸ್ ಮನ್ 80 ಅಥವಾ ಆಸುಪಾಸು ರನ್ ಗಳಿಸಿದರೂ ಸಾಕು ತಂಡದ ಮೊತ್ತ 300 ದಾಟುವುದು ಗ್ಯಾರಂಟಿ. ಅವರು ಕ್ರೀಸ್ ನಲ್ಲಿದ್ದಷ್ಟು ಹೊತ್ತು ಬೌಲರ್ ಗಳ ಬೆವರಿಳಿಸುವುದು ಖಚಿತವಾಗಿತ್ತು. ಇದುವೇ ನಾಯಕನಾಗಿದ್ದಾಗ ನನಗೆ ಹೆಚ್ಚು ತಲೆ ನೋವು ಕೊಡುತ್ತಿತ್ತು” ಎಂದು ಇಂಜಿ ಹೇಳಿಕೊಂಡಿದ್ದಾರೆ.

ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಯದೇ ಇರುವುದು ಉತ್ತಮ ಬೆಳವಣಿಗೆಯಲ್ಲ ಎಂದೂ ಇಂಜಮಾಮ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಾನಿಯಾ ಮಿರ್ಜಾಗೇ ಐಟಂ ಸಾಂಗ್ ಆಫರ್ ಕೊಟ್ಟ ಈ ನಿರ್ದೇಶಕ!