Select Your Language

Notifications

webdunia
webdunia
webdunia
webdunia

ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದರೂ ಪಿವಿ ಸಿಂಧುಗೆ ಖುಷಿಯಾಗಿಲ್ಲ ಯಾಕೆ?!

ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದರೂ ಪಿವಿ ಸಿಂಧುಗೆ ಖುಷಿಯಾಗಿಲ್ಲ ಯಾಕೆ?!
ಜಕಾರ್ತ , ಬುಧವಾರ, 29 ಆಗಸ್ಟ್ 2018 (08:47 IST)
ಜಕಾರ್ತ: ಏಷ್ಯನ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಟ್ಟರೂ ಭಾರತದ ಖ‍್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ತೃಪ್ತಿಯಾಗಿಲ್ಲವಂತೆ.

ಎಲ್ಲರೂ ಸಿಂಧು ಸಾಧನೆಯನ್ನು ಕೊಂಡಾಡುತ್ತಿದ್ದರೆ ಸಿಂಧು ಮಾತ್ರ ಛೇ.. ಇನ್ನೂ ಸ್ವಲ್ಪ ತಾಳ್ಮೆಯಿಂದ ಆಡಿದ್ದರೆ.. ಎಂದು ತಮ್ಮನ್ನು ತಾವೇ ಹಳಿದುಕೊಳ್ಳುತ್ತಿದ್ದಾರೆ.

ಹಾಗಿದ್ದರೂ ತೈಪೈ ಎದುರಾಳಿ ಝೂ ಯಿಂಗ್ ಸೋಲಿಸಲಾಗದ ಆಟಗಾರ್ತಿಯೇನೂ ಅಲ್ಲ. ಕೊಂಚ ಪರಿಶ್ರಮ, ತಾಳ್ಮೆ ಇದ್ದರೆ ಆಕೆಯನ್ನೂ ಸೋಲಿಸಬಹುದು ಎಂದು ಸಿಂಧು ಹೇಳಿಕೊಂಡಿದ್ದಾರೆ. ತಮ್ಮಿಬ್ಬರ ಸೋಲಿನ ನಡುವೆ ಹೆಚ್ಚು ಅಂತರವಿಲ್ಲದಿರುವುದೇ ಇದಕ್ಕೆ ಸಾಕ್ಷಿ ಎಂದು ಸಿಂಧು ಹೇಳಿಕೊಂಡಿದ್ದಾರೆ. ಆಕೆಯಿಂದ ಅಂಕ ಕಸಿದುಕೊಳ‍್ಳುವುದು ಸುಲಭವಾಗಿರಲಿಲ್ಲ. ಆಕೆ ರಕ್ಷಣಾತ್ಮಕ ಆಟವಾಡುವುದರಲ್ಲಿ ಎತ್ತಿದ ಕೈ ಎಂದು ಸಿಂಧು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯನ್ ಗೇಮ್ಸ್ ಕ್ರೀಡಾಪಟುಗಳಿಗೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮಾಡಿದ ಕೆಲಸ ಈಗ ವೈರಲ್!