Select Your Language

Notifications

webdunia
webdunia
webdunia
webdunia

ಹಾರ್ದಿಕ್ ಪಾಂಡ್ಯಗೆ ಕೊಹ್ಲಿ, ಧೋನಿ ಪ್ರೇರಣೆ

ಹಾರ್ದಿಕ್ ಪಾಂಡ್ಯಗೆ ಕೊಹ್ಲಿ, ಧೋನಿ ಪ್ರೇರಣೆ
ರಾಂಚಿ , ಬುಧವಾರ, 26 ಅಕ್ಟೋಬರ್ 2016 (08:46 IST)
ರಾಂಚಿ: ಒತ್ತಡ ಸನ್ನಿವೇಶಗಳು ಎದುರಾದಾಗ ತನ್ನ ಸಾಮರ್ಥ್ಯ ಇನ್ನಷ್ಟು ಹೆಚ್ಚುತ್ತದೆ. ಅಂತಹ ಸನ್ನಿವೇಶಗಳಲ್ಲಿ ಧೋನಿ ಮತ್ತು ಕೊಹ್ಲಿಯೇ ತನಗೆ ಪ್ರೇರಣೆ ಎಂದು ಟೀಂ ಇಂಡಿಯಾ ಯುವ ವೇಗಿ ಹಾರ್ದಿಕ್ ಪಾಂಡ್ಯ ಹೇಳಿಕೊಂಡಿದ್ದಾರೆ.

“ಅವರಿಬ್ಬರೂ ಬ್ಯಾಟಿಂಗ್ ಮಾಡುವಾಗ ಕಲಿಯಲು ಸಾಕಷ್ಟಿದೆ. ವಿಕೆಟ್ ನಡುವೆ ಅವರು ಓಡುವ ಪರಿ ನಮಗೆ ಪಾಠ. ಅವರಿಬ್ಬರು ಬ್ಯಾಟಿಂಗ್ ಮಾಡುವುದನ್ನು ನೋಡುವುದೇ ಚೆಂದ” ಎಂದು ಪಾಂಡ್ಯ ಹೇಳಿಕೊಂಡಿದ್ದಾರೆ.

ಧೋನಿಯ ಬ್ಯಾಟಿಂಗ್ ನಿಂದ ಸಾಕಷ್ಟು ಪ್ರಭಾವಿತನಾಗಿದ್ದೇನೆ ಎನ್ನುವ ಪಾಂಡ್ಯ ತಂಡಕ್ಕೆ ಅಗತ್ಯವೆನಿಸುವ ಯಾವುದೇ ಕ್ರಮಾಂಕದಲ್ಲೂ ಆಡಲು ಸಿದ್ಧನಿದ್ದೇನೆ ಎಂದಿದ್ದಾರೆ. ಅಲ್ಲದೆ ತಮ್ಮ ಬೌಲಿಂಗ್ ಸಹವರ್ತಿ ಕೇದಾರ್ ಜಾದವ್ ಗೂ ಪಾಂಡ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬ್ರೆಂಡನ್ ಮೆಕ್ಕಲಂ ಜೀವನ ಚರಿತ್ರೆ ಡಿಕ್ಲೇರ್ಡ್