Select Your Language

Notifications

webdunia
webdunia
webdunia
webdunia

ಸುನಿಲ್ ಶೆಟ್ಟಿ ಬಂಗಲೆಯಲ್ಲೇ ಕೆಎಲ್ ರಾಹುಲ್-ಅಥಿಯಾ ಮದುವೆ?

ಸುನಿಲ್ ಶೆಟ್ಟಿ ಬಂಗಲೆಯಲ್ಲೇ ಕೆಎಲ್ ರಾಹುಲ್-ಅಥಿಯಾ ಮದುವೆ?
ಮುಂಬೈ , ಬುಧವಾರ, 7 ಸೆಪ್ಟಂಬರ್ 2022 (09:01 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಮದುವೆಯಾಗುವುದು ಪಕ್ಕಾ ಆಗಿದೆ.

ಆದರೆ ಇದುವರೆಗೆ ಇಬ್ಬರೂ ಯಾವಾಗ ಮದುವೆ ಎಂಬ ವಿಚಾರ ಬಹಿರಂಗಪಡಿಸಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ರಾಹುಲ್-ಅಥಿಯಾ ಈಗಾಗಲೇ ಮದುವೆ ಬಳಿಕದ ಜೀವನಕ್ಕಾಗಿ ಮನೆ ಮಾಡಿದ್ದಾರೆ ಎಂಬ ಸುದ್ದಿ ಬಂದಿತ್ತು.

ಇದೀಗ ಮದುವೆ ಸುನಿಲ್ ಶೆಟ್ಟಿ ಅವರ ಖಂಡಾಲದಲ್ಲಿರುವ ಬಂಗಲೆಯಲ್ಲಿ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಕ್ರಿಕೆಟ್ ನಿಂದ ಬಿಡುವು ಸಿಕ್ಕ ತಕ್ಷಣವೇ ಇಬ್ಬರೂ ಮದುವೆಯಾಗುವ ಯೋಜನೆ ಹಾಕಿಕೊಂಡಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಸ್ತ್ರಚಿಕಿತ್ಸೆಗೊಳಗಾದ ಕ್ರಿಕೆಟಿಗ ರವೀಂದ್ರ ಜಡೇಜಾ