Select Your Language

Notifications

webdunia
webdunia
webdunia
webdunia

ವೇಗಿ ಅರ್ಷ್ ದೀಪ್ ಸಿಂಗ್ ನೆರವಿಗೆ ಬಂದ ಕೇಂದ್ರ ಸಚಿವಾಲಯ

ವೇಗಿ ಅರ್ಷ್ ದೀಪ್ ಸಿಂಗ್ ನೆರವಿಗೆ ಬಂದ ಕೇಂದ್ರ ಸಚಿವಾಲಯ
ನವದೆಹಲಿ , ಸೋಮವಾರ, 5 ಸೆಪ್ಟಂಬರ್ 2022 (18:49 IST)
ನವದೆಹಲಿ: ಪಾಕಿಸ್ತಾನ ವಿರುದ್ಧ ನಿನ್ನೆ ನಡೆದಿದ್ದ ಪಂದ್ಯದಲ್ಲಿ ಕ್ಯಾಚ್ ಬಿಟ್ಟಿದ್ದ ಟೀಂ ಇಂಡಿಯಾ ವೇಗಿ ಅರ್ಷ್ ದೀಪ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರು.

ಕಿಡಿಗೇಡಿಗಳು ಅವರ ವಿಕಿಪೀಡಿಯಾ ಪುಟದಲ್ಲಿ ತಿದ್ದುಪಡಿ ಮಾಡಿ ಖಲಿಸ್ತಾನ ಬೆಂಬಲಿಗ ಎಂದು ಅವಮಾನ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಮಧ‍್ಯೆ ಕ್ರಿಕೆಟಿಗ ವಿರಾಟ್ ಕೊಹ್ಲಿ, ಹರ್ಭಜನ್ ಸಿಂಗ್ ಸೇರಿದಂತೆ ಅನೇಕರು ಅರ್ಷ್ ದೀಪ್ ಸಿಂಗ್ ಗೆ ಬೆಂಬಲ ವ್ಯಕ್ತಪಡಿಸಿದ್ದರು.

ಇದೀಗ ಅವರ ಮೇಲೆ ನಡೆದಿರುವ ಈ ಕುಕೃತ್ಯವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಖಂಡಿಸಿದ್ದಾರೆ.  ಇದು ಸಾಮಾಜಿಕ ಜಾಲತಾಣದ ಸುರಕ್ಷತೆಯನ್ನೇ ಪ್ರಶ್ನೆ ಮಾಡುವಂತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕರ ದಿನದಂದು ಗ್ರೆಗ್ ಚಾಪೆಲ್ ಗೆ ನೆನೆದ ಸೌರವ್ ಗಂಗೂಲಿ!