Select Your Language

Notifications

webdunia
webdunia
webdunia
webdunia

ಬಿಸಿಸಿಐ ಹೇಳಿದರೆ ಪಾಕ್ ಜತೆ ಆಡ್ತೀವಿ ಎಂದ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್

ಬಿಸಿಸಿಐ ಹೇಳಿದರೆ ಪಾಕ್ ಜತೆ ಆಡ್ತೀವಿ ಎಂದ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್
ಮುಂಬೈ , ಶುಕ್ರವಾರ, 22 ಫೆಬ್ರವರಿ 2019 (11:27 IST)
ಮುಂಬೈ: ಪುಲ್ವಾಮಾ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ವಿಶ್ವಕಪ್ ನಲ್ಲಿ ಕ್ರಿಕೆಟ್ ಆಡುವ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಭಾರತ ಮತ್ತು ಪಾಕಿಸ್ತಾನದಲ್ಲಿ ವಿಶ್ವಕಪ್ ನಲ್ಲಿ ಆಡಬಾರದು ಎಂದು ಒತ್ತಾಯಗಳು ಬರುತ್ತಿರುವ ಹಿನ್ನಲೆಯಲ್ಲಿ ಬಿಸಿಸಿಐ ಅಧಿಕಾರಿಗಳು ಸಭೆ ಸೇರಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತಿದ್ದಾರೆ.

ಈ ನಡುವೆ ಸ್ಪಿನ್ನರ್ ಚಾಹಲ್ ಒಂದು ವೇಳೆ ಬಿಸಿಸಿಐ ಒಪ್ಪಿಗೆ ಕೊಟ್ಟರೆ ನಾವು ಪಾಕ್ ವಿರುದ್ಧ ಆಡುತ್ತೇವೆ ಎಂದಿದ್ದಾರೆ. ಆಡಬೇಕೋ ಬೇಡವೋ ಎಂಬುದು ನಮ್ಮ ಕೈಯಲ್ಲಿ ಇಲ್ಲ. ಬಿಸಿಸಿಐ ಹೇಳಿದರೆ ಆಡುತ್ತೇವೆ. ಪಾಕಿಸ್ತಾನದಲ್ಲಿ ಇರುವವರೆಲ್ಲಾ ತಪ್ಪಿತಸ್ಥರು ಎಂದು ನಾನು ಹೇಳಲ್ಲ. ಆದರೆ ಈ ಪ್ರಕರಣದಲ್ಲಿ ಯಾರ ಕೈವಾಡವಿದೆ ಅವರಿಗೆ ತಕ್ಕ ಶಿಕ್ಷೆಯಾಗಬೇಕು’ ಎಂದು ಚಾಹಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಪರ ಟಿ20 ಪಂದ್ಯಗಳಲ್ಲಿ ಯಾರೂ ಮಾಡದಷ್ಟು ರನ್ ಗಳಿಸಿದ ಶ್ರೇಯಸ್ ಅಯ್ಯರ್