Select Your Language

Notifications

webdunia
webdunia
webdunia
webdunia

ಡಬ್ಲ್ಯುಪಿಎಲ್ ಫೈನಲ್: ಆರ್ ಸಿಬಿ ಮಹಿಳೆಯರಿಗೆ ವಿಡಿಯೋ ಕಾಲ್ ಮಾಡಿದ ವಿರಾಟ್ ಕೊಹ್ಲಿ

WPL RCB Virat Kohli

Krishnaveni K

ದೆಹಲಿ , ಸೋಮವಾರ, 18 ಮಾರ್ಚ್ 2024 (07:10 IST)
Photo Courtesy: Twitter
ದೆಹಲಿ: ಡಬ್ಲ್ಯುಪಿಎಲ್ ನಲ್ಲಿ ಎರಡನೇ ಆವೃತ್ತಿಯಲ್ಲಿ ಕಪ್ ಗೆದ್ದು ಬೀಗಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ವಿಡಿಯೋ ಕಾಲ್ ಮುಖಾಂತರ ಶುಭಾಶಯ ಕೋರಿದ್ದಾರೆ.

ಮಹಿಳಾ ತಂಡವಿರಲಿ, ಪುರುಷರ ತಂಡವಿರಲಿ, ಆರ್ ಸಿಬಿಗೆ ಇದುವರೆಗೆ ಕಪ್ ಕನಸಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಮಹಿಳೆಯರು ಕೊನೆಗೂ ಅಭಿಮಾನಿಗಳ ಈ ಸಲ ಕಪ್ ನಮ್ದೇ ಘೋಷವಾಕ್ಯವನ್ನು ನಿಜ ಮಾಡಿದ್ದರು. ಆರ್ ಸಿಬಿ ಗೆಲ್ಲುತ್ತಿದ್ದಂತೇ ಇಡೀ ಮೈದಾನದಲ್ಲಿದ್ದ ಅಭಿಮಾನಿಗಳು, ಟಿವಿ ನೋಡುತ್ತಿದ್ದ ಪ್ರೇಕ್ಷಕರು, ಆರ್ ಸಿಬಿ ಆಟಗಾರರು ಕುಣಿದು ಕುಪ್ಪಳಿಸಿದರು.

ಕೇವಲ ಅಭಿಮಾನಿಗಳು ಮಾತ್ರವಲ್ಲ ಸ್ವತಃ ವಿರಾಟ್ ಕೊಹ್ಲಿ ಮೈದಾನದಲ್ಲಿಯೇ ಆಟಗಾರರ ಜೊತೆ ವಿಡಿಯೋ ಕಾಲ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಪ್ರತಿಯೊಬ್ಬ ಆಟಗಾರರ ಜೊತೆಯೂ ವಿಡಿಯೋ ಕಾಲ್ ಮುಖಾಂತರ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಕೊಹ್ಲಿ ಅಭಿನಂದನೆ ಸಲ್ಲಿಸುತ್ತಿದ್ದಂತೇ ನಾಯಕಿ ಸ್ಮೃತಿ ಮಂಧಾನ ಕೂಡಾ ಕೊಂಚ ಭಾವುಕರಾದರು. ಬಳಿಕ ಆಟಗಾರ್ತಿಯರು ಕುಣಿದು ಕುಪ್ಪಳಿಸಿ ತಮ್ಮ ಸಂತೋಷ ಹೊರಾಕಿದ್ದಾರೆ. ಎಲ್ಲೆಡೆ ಈ ಸಲ ಕಪ್ ನಮ್ದೇ ಎನ್ನುವ ಸಂತೋಷ ಉಕ್ಕಿಹರಿಯುತ್ತಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್ ಫೈನಲ್: ಹೌದು.. ಈ ಸಲ ಕಪ್ ನಮ್ದೇ ಎಂದ ಆರ್ ಸಿಬಿ