Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ನನ್ನ ಸುಲಭದ ಭೇಟೆಯಾಗಿದ್ದರು: ಮತ್ತೆ ಮಿಚೆಲ್ ಜಾನ್ಸನ್ ವಿವಾದ

ವಿರಾಟ್ ಕೊಹ್ಲಿ ನನ್ನ ಸುಲಭದ ಭೇಟೆಯಾಗಿದ್ದರು: ಮತ್ತೆ ಮಿಚೆಲ್ ಜಾನ್ಸನ್ ವಿವಾದ
ಸಿಡ್ನಿ , ಗುರುವಾರ, 7 ಡಿಸೆಂಬರ್ 2023 (15:30 IST)
ಸಿಡ್ನಿ: ಇತ್ತೀಚೆಗಷ್ಟೇ ಡೇವಿಡ್ ವಾರ್ನರ್ ಗೆ ವಿದಾಯ ಪಂದ್ಯ ಆಯೋಜಿಸುತ್ತಿರುವುದೇಕೆ ಎಂದು ಪ್ರಶ್ನಿಸಿ ವಿವಾದಕ್ಕೆ ಗುರಿಯಾಗಿದ್ದ ಆಸ್ಟ್ರೇಲಿಯಾ ವೇಗಿ ಮಿಚೆಲ್ ಜಾನ್ಸನ್ ಈಗ ಕೊಹ್ಲಿ ಬಗ್ಗೆ ನೀಡಿದ ಹೇಳಿಕೆಯಿಂದ ಸುದ್ದಿಯಾಗಿದ್ದಾರೆ.
 

ಅಭಿಮಾನಿಗಳೊಂದಿಗಿನ ಪ್ರಶ್ನೋತ್ತರ ಸೆಷನ್ ನಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಜಾನ್ಸನ್ ಹಗುರವಾಗಿ ಮಾತನಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನೆಟ್ಟಿಗರೊಬ್ಬರು ವಿರಾಟ್ ಕೊಹ್ಲಿ ನೆನಪಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಜಾನ್ಸನ್ ‘ಯಾರು?’ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ. ಅಲ್ಲದೆ, ಮತ್ತೊಬ್ಬರು ‘ಬ್ರದರ್ ಕೊಹ್ಲಿಗೆ ನೀವು ಫೇವರಿಟ್ ಬೌಲರ್’ ಎಂದು ಕಾಲೆಳೆದಿದ್ದರು. ಇದಕ್ಕೆ ಉತ್ತರಿಸಿರುವ ಜಾನ್ಸನ್ ‘ಕೊಹ್ಲಿ ವಿಕೆಟ್ ಪಡೆಯುವುದು ನನಗೆ ತುಂಬಾ ಸುಲಭವಾಗಿತ್ತು’ ಎಂದು ಹಗುರವಾಗಿ ಮಾತನಾಡಿದ್ದಾರೆ.

ಕೊಹ್ಲಿ ಜೊತೆ ಮೈದಾನದಲ್ಲಿ ಜಾನ್ಸನ್ ಅನೇಕ ಬಾರಿ ಕಿತ್ತಾಡಿಕೊಂಡಿದ್ದಾರೆ. ಇಬ್ಬರ ನಡುವೆ ಮೈದಾನದ ಹೊರಗೂ ಮಾತಿನ ಚಕಮಕಿಯಾಗಿದ್ದು ಇದೆ. ಈಗಲೂ ಜಾನ್ಸನ್ ಅದನ್ನು ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಯಾನ್ ಲಾರಾ ಅವರ ಈ ದಾಖಲೆಯನ್ನು ಇದುವರೆಗೆ ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ!