Select Your Language

Notifications

webdunia
webdunia
webdunia
webdunia

ವೆಸ್ಟ್ ಇಂಡೀಸ್ ವಿರುದ್ಧ ವಿರಾಟ್ ಕೊಹ್ಲಿಗೆ ಹೊಸ ದಾಖಲೆ ಮಾಡುವ ಅವಕಾಶ

ವೆಸ್ಟ್ ಇಂಡೀಸ್ ವಿರುದ್ಧ ವಿರಾಟ್ ಕೊಹ್ಲಿಗೆ ಹೊಸ ದಾಖಲೆ ಮಾಡುವ ಅವಕಾಶ
ಮುಂಬೈ , ಮಂಗಳವಾರ, 2 ಅಕ್ಟೋಬರ್ 2018 (06:46 IST)
ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹೊಸ ದಾಖಲೆ ಮಾಡುವ ಅವಕಾಶ ಎದುರಾಗಿದೆ.

ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಾಯಕರಾಗಿ ಅತೀ ಹೆಚ್ಚು ರನ್ ಗಳಿಸಿದ ಮೊಹಮ್ಮದ್ ಅಜರುದ್ದೀನ್ ದಾಖಲೆ ಮುರಿಯುವ ಅವಕಾಶ ಹೊಂದಿದ್ದಾರೆ.

ವಿಂಡೀಸ್ ವಿರುದ್ಧ ಅಜರುದ್ದೀನ್ 539 ‍ರನ್ ಗಳಿಸಿದ್ದಾರೆ. ಕೊಹ್ಲಿ ಸದ್ಯಕ್ಕೆ 502 ರನ್ ಗಳಿಸಿದ್ದು, 37 ರನ್ ಗಳ ಕೊರತೆ ಅನುಭವಿಸಿದ್ದಾರೆ. ಈಗಾಗಲೇ ಧೋನಿಯ 476 ರನ್ ಗಳ ದಾಖಲೆ ಮುರಿದಿರುವ ಕೊಹ್ಲಿಗೆ ಅಜರುದ್ದೀನ್ ದಾಖಲೆ ಮುರಿಯುವುದು ಕಷ್ಟವೇನಲ್ಲ. 10 ಟೆಸ್ಟ್ ಪಂದ್ಯಗಳಿಂದ ಕೊಹ್ಲಿ ಈ ದಾಖಲೆ ಮಾಡಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ತನಗೆಂಥಾ ಮಗು ಬೇಕು ಎಂದು ಬಹಿರಂಗಪಡಿಸಿದ ಸಾನಿಯಾ ಮಿರ್ಜಾ