Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ಗೆ ತೆರಳುವ ಮೊದಲು ಬಾಲಕಿಯ ಆಸೆ ಪೂರೈಸಿದ ವಿರಾಟ್ ಕೊಹ್ಲಿ

ಇಂಗ್ಲೆಂಡ್ ಗೆ ತೆರಳುವ ಮೊದಲು ಬಾಲಕಿಯ ಆಸೆ ಪೂರೈಸಿದ ವಿರಾಟ್ ಕೊಹ್ಲಿ
ನವದೆಹಲಿ , ಭಾನುವಾರ, 24 ಜೂನ್ 2018 (08:28 IST)
ನವದೆಹಲಿ: ಮಹತ್ವದ ಇಂಗ್ಲೆಂಡ್ ಸರಣಿಗಾಗಿ ಟೀಂ ಇಂಡಿಯಾ ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಇಂಗ್ಲೆಂಡ್ ಗೆ ತೆರಳಿದೆ.

ಆದರೆ ಇಂಗ್ಲೆಂಡ್ ವಿಮಾನವೇರುವ ಮುನ್ನ ವಿರಾಟ್ ಕೊಹ್ಲಿ ಪುಟ್ಟ ಬಾಲಕಿಯೊಬ್ಬಳು ಕನಸು ನನಸಾಗಿದ್ದಾರೆ. ಆ ಪುಟ್ಟ ಬಾಲಕಿಯ ಆಸೆ ನೆರವೇರಿಸಿ ಕೊಹ್ಲಿಯ ನಡೆಗೆ ಟ್ವಿಟರ್ ನಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ರಾಧಾ ಎನ್ನುವ ಕೊಹ್ಲಿಯ ಅಪ್ಪಟ ಅಭಿಮಾನಿ. ಈ ಪುಟಾಣಿ ಅಭಿಮಾನಿಯೊಂದಿಗೆ ವಿಮಾನ ನಿಲ್ದಾಣದಲ್ಲಿ ಫೋಟೋ ತೆಗೆಸಿಕೊಂಡ ಕೊಹ್ಲಿ ಅವಳ ಆಸೆ ಪೂರೈಸಿದ್ದಾರೆ. ಇದನ್ನು ನೋಡಿ ಟ್ವಿಟರಿಗರು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಹುಡುಗಿಯ ಶುಭ ಹಾರೈಕೆಯಿಂದಲೇ ಭಾರತ ಗೆದ್ದು ಬರಬಹುದು ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಜೆಂಟೀನಾ ಸೋತಿದ್ದಕ್ಕೆ ಪ್ರಾಣ ಕಳೆದುಕೊಂಡ ಕೇರಳ ಯುವಕ?!