Select Your Language

Notifications

webdunia
webdunia
webdunia
webdunia

U-19 ವಿಶ್ವಕಪ್ ಫೈನಲ್ ಗೆ ಲಗ್ಗೆಯಿಟ್ಟ ಭಾರತ

U19WorldCup

Krishnaveni K

ಬೆನೋನಿ , ಬುಧವಾರ, 7 ಫೆಬ್ರವರಿ 2024 (09:20 IST)
Photo Courtesy: Twitter
ಬೆನೋನಿ: ಅತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 2 ವಿಕೆಟ್ ಗಳಿಂದ ಸೋಲಿಸಿದ ಭಾರತ ಕ್ರಿಕೆಟ್ ತಂಡ ಅಂಡರ್ 19 ವಿಶ್ವಕಪ್ ಫೈನಲ್ ಗೆ ಲಗ್ಗೆಯಿಟ್ಟಿದೆ.

ಈಗಾಗಲೇ 5 ಬಾರಿ ಅಂಡರ್ 19 ವಿಶ್ವಕಪ್ ಗೆದ್ದಿರುವ ಭಾರತ ಇದೀಗ ಭಾನುವಾರ ನಡೆಯಲಿರುವ ಫೈನಲ್ ನಲ್ಲಿ ಆಸ್ಟ್ರೇಲಿಯಾ ಅಥವಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿತು.

ಈ ಮೊತ್ತ ಬೆನ್ನತ್ತಿದ ಭಾರತ 48.5 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 248 ರನ್ ಗಳಿಸಿತು. ಭಾರತದ ಪರ ನಾಯಕ ಉದಯ್ ಸಹಾರಣ್ ಮತ್ತು ಕೆಳ ಕ್ರಮಾಂಕದಲ್ಲಿ ಸಚಿನ್ ಭರ್ಜರಿ ಆಟವಾಡಿ ತಂಡಕ್ಕೆ ಗೆಲುವು ಕೊಡಿಸಿದರು. ಸಚಿನ್ 95 ಎಸೆತಗಳಿಂದ 96 ರನ್ ಗಳಿಸಿದರೆ ಸಹಾರಣ್ 124 ಎಸೆತಗಳಿಂದ 81 ರನ್ ಗಳಿಸಿದರು. ಇಂದು ಆಸ್ಟ್ರೇಲಿಯಾ-ಪಾಕಿಸ್ತಾನ ನಡುವೆ ಎರಡನೇ ಸೆಮಿಫೈನಲ್ ನಡೆಯಲಿದ್ದು, ಅವರಲ್ಲಿ ಗೆದ್ದವರು ಭಾರತದ ಜೊತೆ ಫೈನಲ್ ಆಡಲಿದ್ದಾರೆ.

172 ರನ್ ಗಳ ಜೊತೆಯಾಟವಾಡಿದ ಸುಹಾರಣ್-ಸಚಿನ್
ಒಂದು ಹಂತದಲ್ಲಿ 32 ರನ್ ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗಿದ್ದು ಸುಹಾರಣ್ ಮತ್ತು ಸಚಿನ್ ಜೊತೆಯಾಟ. ಬರೋಬ್ಬರಿ 31 ಓವರ್ ನಿಭಾಯಿಸಿದ ಜೋಡಿ 172 ರನ್ ಗಳ ಜೊತೆಯಾಟವಾಡಿತು. ಈ ಪೈಕಿ ಸಚಿನ್ ಆಕ್ರಮಣಕಾರಿಯಾಗಿ ಆಡಿದರೆ ಸುಹಾರಣ್ ನಾಯಕನಾಗಿ ಜವಾಬ್ಧಾರಿಯುತ ಆಟವಾಡಿದರು. ವಿಪರ್ಯಾಸವೆಂದರೆ ಸಚಿನ್ ಶತಕದ ಹೊಸ್ತಿಲಲ್ಲಿ ಔಟಾದರು. ಕೊನೆಯಲ್ಲಿ ಸುಹಾರಣ್ ಕೂಡಾ ರನೌಟ್ ಆಗಬೇಕಾಯಿತು. ಆದರೆ ಅಷ್ಟರಲ್ಲಿ ಇಬ್ಬರೂ ತಂಡವನ್ನು ಸುರಕ್ಷಿತ ದಡಕ್ಕೆ ಕರೆದೊಯ್ದಿದ್ದರು.

ಇದೀಗ ಭಾರತ 6 ನೇ ಬಾರಿಗೆ ಅಂಡರ್ 19 ವಿಶ್ವಕಪ್ ಗೆಲ್ಲುವ ಕನಸು ಹೊತ್ತು ನಿಂತಿದೆ. ಭಾನುವಾರ ಇದೇ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ಮಧ‍್ಯಾಹ್ನ 1.30 ಕ್ಕೆ ಪಂದ್ಯ ನಡೆಯುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ತಂಡಕ್ಕೆ ಮರಳಿದ ಮಯಾಂಕ್ ಅಗರ್ವಾಲ್