Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯ ಪತ್ನಿ ಪ್ರೇಮಕ್ಕೆ ಉರಿದುಬಿದ್ದ ಟ್ವಿಟರಿಗರು!

ವಿರಾಟ್ ಕೊಹ್ಲಿಯ ಪತ್ನಿ ಪ್ರೇಮಕ್ಕೆ ಉರಿದುಬಿದ್ದ ಟ್ವಿಟರಿಗರು!
ಲಾರ್ಡ್ಸ್ , ಗುರುವಾರ, 9 ಆಗಸ್ಟ್ 2018 (09:21 IST)
ಲಾರ್ಡ್ಸ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದಾ ತನ್ನ ಪತ್ನಿ ಅನುಷ್ಕಾ ಶರ್ಮಾ ಬಗ್ಗೆ ಹೊಗಳುತ್ತಲೇ ಇರುತ್ತಾರೆ. ಸದ್ಯಕ್ಕೆ ಅನುಷ್ಕಾ ಕೂಡಾ ಟೀಂ ಇಂಡಿಯಾದ ಭಾಗವೇ ಆಗಿದ್ದಾರೆ. ಆದರೆ ಟ್ವಿಟರಿಗರಿಗೆ ಕೊಹ್ಲಿಯ ಈ ಪತ್ನಿ ಪ್ರೇಮ ಇಷ್ಟವಾಗಿಲ್ಲ.
 

ಅದಕ್ಕೆ ಕಾರಣವಾಗಿದ್ದು ಒಂದು ಫೋಟೋ. ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಲ್ಲಿನ ಭಾರತೀಯ ರಾಯಭಾರ ಕಚೇರಿ ಔತಣಕೂಟ ಏರ್ಪಡಿಸಿತ್ತು. ಔತಣಕೂಟದ ಬಳಿಕ ರಾಯಭಾರಿ ಕಚೇರಿ ಅಧಿಕಾರಿಗಳೊಂದಿಗೆ ಟೀಂ ಇಂಡಿಯಾ ಕ್ರಿಕೆಟಿಗರು ಫೋಟೋಗೆ ಪೋಸ್ ಕೊಟ್ಟಿದ್ದರು.

ಆದರೆ ಈ ಫೋಟೋದಲ್ಲಿ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜತೆಗೆ ನಿಂತಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರ ಗ್ರೂಪ್ ಫೋಟೋದಲ್ಲೂ ತಮ್ಮ ಪತ್ನಿ ಅನುಷ್ಕಾರನ್ನು ನಿಲ್ಲಿಸಿದ್ದಕ್ಕೆ ಕೊಹ್ಲಿ ವಿರುದ್ಧ ಟ್ವಿಟರಿಗರು ಸಿಡಿದೆದ್ದಿದ್ದಾರೆ.

ಅನುಷ್ಕಾ ಕೂಡಾ ಟೀಂ ಇಂಡಿಯಾ ಕ್ರಿಕೆಟಿಗಳೇ ಎಂದು ಕೆಲವರು ಪ್ರಶ್ನಿಸಿದ್ದರೆ ಇನ್ನು ಕೆಲವರು ಭಾರತದ ಉಪ ನಾಯಕನೇ ಕೊನೆಯ ಸಾಲಿನಲ್ಲಿ ನಿಂತಿದ್ದಾರೆ. ಆದರೆ ತಂಡಕ್ಕೆ ಸೇರದ ಪತ್ನಿ ಅನುಷ್ಕಾಳನ್ನು ಕೊಹ್ಲಿ ಮೊದಲ ಸಾಲಿನಲ್ಲಿ ನಿಲ್ಲಿಸಿದ್ದಾರೆ ಎಂದು ಇನ್ನು ಕೆಲವರು ಟೀಕೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ಸ್ಟಾರ್ ಆಟಗಾರ್ತಿಯೊಂದಿಗೆ ರೆಸ್ಟೋರೆಂಟ್ ನಲ್ಲಿ ಕಾಣಿಸಿಕೊಂಡ ಸಚಿನ್ ಪುತ್ರ ಅರ್ಜುನ್