Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿ ಸೋತರೆ ಟೀಂ ಇಂಡಿಯಾಕ್ಕೆ ಆಗಲಿದೆ ಬಹುದೊಡ್ಡ ನಷ್ಟ!

ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿ ಸೋತರೆ ಟೀಂ ಇಂಡಿಯಾಕ್ಕೆ ಆಗಲಿದೆ ಬಹುದೊಡ್ಡ ನಷ್ಟ!
ಲಂಡನ್ , ಬುಧವಾರ, 15 ಆಗಸ್ಟ್ 2018 (08:47 IST)
ಲಂಡನ್: ಭಾರತ-ಇಂಗ್ಲೆಂಡ್ ನಡುವಿನ ಪ್ರಸಕ್ತ ಟೆಸ್ಟ್ ಸರಣಿ ನೋಡಿದರೆ ಈ ಸರಣಿಯಲ್ಲಿ ಟೀಂ ಇಂಡಿಯಾ ಗೆಲ್ಲುವುದು ಬಿಡಿ, ವೈಟ್ ವಾಶ್ ಮಾಡಿಸಿಕೊಳ್ಳದಿದ್ದರೆ ಸಾಕು ಎಂಬಂಥಾ ಪರಿಸ್ಥಿತಿ ಇದೆ.
 

ಏಳು ವರ್ಷಗಳ ಮೊದಲು ಧೋನಿ ನೇತೃತ್ವದ ಟೀಂ ಇಂಡಿಯಾ 0-4 ಅಂತರದಿಂದ ಟೆಸ್ಟ್ ಸರಣಿ ಸೋತು, ತಮ್ಮ ಬಳಿಯಿದ್ದ ನಂ.1 ಪಟ್ಟವನ್ನು ಕಳೆದುಕೊಂಡು ಬಂದಿತ್ತು.

ಈಗ ಕೊಹ್ಲಿ ಬಳಗದ ಅವಸ್ಥೆ ನೋಡಿದರೆ ಇದೇ ಗತಿಯಾಗಬಹುದು ಎಂಬ ಅನುಮಾನ ಕಾಡುತ್ತಿದೆ. ಸದ್ಯಕ್ಕೆ ನಂ.1 ಟೆಸ್ಟ್ ತಂಡವಾಗಿರುವ ಟೀಂ ಇಂಡಿಯಾ ಸರಣಿಯಲ್ಲಿ ವೈಟ್ ವಾಶ್ ಅವಮಾನ ಅನುಭವಿಸಿದರೆ ಸರಣಿ ಜತೆಗೆ ನಂ.1 ಪಟ್ಟವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಪಟ್ಟ ಬಿಡಿ, ಅವಮಾನ ಅನುಭವಿಸದೇ ಇದ್ದರೆ ಸಾಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಗೆಲುವಿನ ಖುಷಿಯಲ್ಲಿರುವ ಇಂಗ್ಲೆಂಡ್ ಗೆ ಶಾಕ್