Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಸಂಭಾವ್ಯ ಓಪನರ್ ಗಳು

Rohit Sharma

Krishnaveni K

ಮುಂಬೈ , ಶನಿವಾರ, 4 ಮೇ 2024 (09:35 IST)
Photo Courtesy: Twitter
ಮುಂಬೈ: ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯಲಿರುವ ಬ್ಯಾಟಿಗರು ಯಾರು ಎಂಬ ಬಗ್ಗೆ ವಿಶ್ಲೇಷಣೆ ಇಲ್ಲಿದೆ.

ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಗೆ 15 ಸದಸ್ಯರ ಟೀಂ ಇಂಡಿಯಾ ಬಳಗವನ್ನು ಆಯ್ಕೆ ಮಾಡಲಾಗಿತ್ತು. ಉಳಿದಂತೆ ನಾಲ್ವರು ಮೀಸಲು ಆಟಗಾರರನ್ನೂ ಆಯ್ಕೆ ಮಾಡಲಾಗಿದೆ. ಟೀಂ ಇಂಡಿಯಾದಲ್ಲಿ ಇಬ್ಬರು ವಿಕೆಟ್ ಕೀಪರ್ ಗಳು, ಐವರು ಬೌಲರ್ ಗಳು, ನಾಲ್ವರು ಆಲ್ ರೌಂಡರ್ ಗಳು ಮತ್ತು ನಾಲ್ವರು ಸ್ಪೆಷಲಿಸ್ಟ್ ಬ್ಯಾಟಿಗರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ಈ ಪೈಕಿ ಆರಂಭಿಕರಾಗಿ ಕಣಕ್ಕಿಳಿಯಬಲ್ಲ ಮೂವರು ಸ್ಪೆಷಲಿಸ್ಟ್ ಗಳು ತಂಡದಲ್ಲಿದ್ದಾರೆ. ರೋಹಿತ್ ಶರ್ಮಾ ಖಾಯಂ ಓಪನರ್ ಆಗಿದ್ದರೆ ಅವರ ಜೊತೆಗೆ ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಆರಂಭಿಕ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ. ಈ ಪೈಕಿ ಮೊದಲ ಆಯ್ಕೆ ಯಶಸ್ವಿ ಜೈಸ್ವಾಲ್ ಆಗಿರುತ್ತಾರೆ.

ಹಾಗಿದ್ದರೂ ಐಪಿಎಲ್ ನಲ್ಲಿ ಆರಂಭಿಕರಾಗಿ ಯಶಸ್ಸು ಕಂಡಿರುವ ವಿರಾಟ್ ಕೊಹ್ಲಿಯನ್ನು ಆರಂಭಿಕರಾಗಿ ಕಣಕ್ಕಿಳಿಸಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ.  ಸದ್ಯಕ್ಕೆ ನಮ್ಮ ತಂಡದ ಕಾಂಬಿನೇಷನ್ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ರೋಹಿತ್ ಹೇಳಿದ್ದಾರೆ. ಅಗತ್ಯ ಬಂದರೆ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿದರೂ ಅಚ್ಚರಿಯಿಲ್ಲ.

ಜೈಸ್ವಾಲ್ ಆರಂಭಿಕರಾಗಿಯೇ ಯಶಸ್ಸು ಕಂಡವರು. ಹೀಗಾಗಿ ಅವರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವ ಸಾಧ‍್ಯತೆ ಕಡಿಮೆ. ಐಪಿಎಲ್ ನಲ್ಲೂ ಜೈಸ್ವಾಲ್ ಆರಂಭಿಕರಾಗಿಯೇ ಸಕ್ಸಸ್ ಕಂಡಿದ್ದಾರೆ. ಹೀಗಾಗಿ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲಿದ್ದಾರೆ. ಅವರು ಓಪನರ್ ಆದರೆ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿಯೇ ಕಣಕ್ಕಿಳಿಯಬಹುದು. ಒಂದು ವೇಳೆ ಕೊಹ್ಲಿ ಆರಂಭಿಕನಾಗಿಯೇ ಕಣಕ್ಕಿಳಿಯಬೇಕೆಂದಿದ್ದರೆ ರೋಹಿತ್ ಶರ್ಮಾ ತಮ್ಮ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ರೋಹಿತ್ ಗೂ ಕೆಳ ಕ್ರಮಾಂಕದಲ್ಲಿ ಆಡಿದ ಅನುಭವವಿದೆ. ಆದರೆ ಆರಂಭಿಕ ಓವರ್ ಗಳಲ್ಲಿ ತಂಡಕ್ಕೆ ಸ್ಪೋಟಕ ಆರಂಭ ನೀಡುವ ರೋಹಿತ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯುವ ಅವಕಾಶ ಕಡಿಮೆ. ಹೀಗಾಗಿ ರೋಹಿತ್-ಜೈಸ್ವಾಲ್ ಜೋಡಿಯೇ ಟಿ20 ವಿಶ್ವಕಪ್ ನಲ್ಲಿ ಭಾರತಕ್ಕೆ ಓಪನಿಂಗ್ ನೀಡುವ ಸಾಧ‍್ಯತೆ ಹೆಚ್ಚಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಗುಜರಾತ್ ಟೈಟನ್ಸ್ ವಿರುದ್ಧ ಗೆಲ್ಲುವ ಉತ್ಸಾಹದಲ್ಲಿ ಆರ್ ಸಿಬಿ