Select Your Language

Notifications

webdunia
webdunia
webdunia
webdunia

ಅಳಿಯ ಕೆಎಲ್ ರಾಹುಲ್ ಗೆ ಕೈ ಕೊಟ್ಟ ಮಾವ ಸುನಿಲ್ ಶೆಟ್ಟಿ

KL Rahul

Krishnaveni K

ಮುಂಬೈ , ಶುಕ್ರವಾರ, 15 ಮಾರ್ಚ್ 2024 (16:23 IST)
ಮುಂಬೈ: ಐಪಿಎಲ್ 2024 ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಇದೀಗ ಹೊಸ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ. ಈ ವಿಡಿಯೋದಲ್ಲಿ ಸುನಿಲ್ ಶೆಟ್ಟಿ ಕೂಡಾ ಕಾಣಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಟ್ವಿಟರ್ ಪೇಜ್ ನಲ್ಲೂ ಸುನಿಲ್ ಶೆಟ್ಟಿ ಮುಂಬೈಗೆ ಸಪೋರ್ಟ್ ಮಾಡಿ ಅಳಿಯ ಕೆಎಲ್ ರಾಹುಲ್ ಗೆ ಕೈ ಕೊಟ್ಟಿದ್ದು ಸ್ಪಷ್ಟವಾಗಿ ಕಾಣುತ್ತಿದೆ.

ಐಪಿಎಲ್ ಕುರಿತಾದ ವಿಡಿಯೋದಲ್ಲಿ ಎಲ್ಲಾ ತಂಡಗಳ ನಾಯಕರು, ಸೆಲೆಬ್ರಿಟಿಗಳು ಬರುತ್ತಾರೆ. ಈ ವಿಡಿಯೋದಲ್ಲಿ ಸುನಿಲ್ ಶೆಟ್ಟಿ ನಾನು ಏನಿದ್ದರೂ ಮುಂಬೈಗೆ ಸಪೋರ್ಟ್ ಎನ್ನುತ್ತಾರೆ. ಅಷ್ಟೇ ಅಲ್ಲದೆ, ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮುಂಬೈ ಇಂಡಿಯನ್ಸ್ ಪೋಸ್ಟ್ ಶೇರ್ ಮಾಡಿರುವ ಸುನಿಲ್ ಶೆಟ್ಟಿ  ಮುಂಬೈಗೆ ಶುಭ ಹಾರೈಸಿದ್ದಾರೆ.

ಇದನ್ನು ನೋಡಿ ನೆಟ್ಟಿಗರು ನಿಮ್ಮ ಅಳಿಯನಿಗೆ ಕೈ ಕೊಟ್ಟಿರಾ ಎಂದು ಕಾಲೆಳೆದಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಎಂದರೆ ಸುನಿಲ್ ಶೆಟ್ಟಿ ಮಗಳ ಗಂಡ ಅಳಿಯ. ಹೀಗಾಗಿ ಅಳಿಯನ ತಂಡವನ್ನು ಬೆಂಬಲಿಸುವುದನ್ನು ಬಿಟ್ಟು ಮುಂಬೈ ತಂಡವನ್ನು ಬೆಂಬಲಿಸುತ್ತಿರುವುದಕ್ಕೆ ಸುನಿಲ್ ಶೆಟ್ಟಿಯನ್ನು ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಅಭಿಮಾನಿಯೊಬ್ಬರು ನಿಮ್ಮ ಫೇವರಿಟ್‍ ಐಪಿಎಲ್ ಟೀಂ ಯಾವುದು ಎಂದು ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿದ್ದು ಇದಕ್ಕೆ ಪ್ರತಿಕ್ರಿಯಿಸಿರುವ ಸುನಿಲ್ ಶೆಟ್ಟಿ, ‘ನನ್ನ ಪ್ರೀತಿ ಮುಂಬೈ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಸಮನಾಗಿ ಹಂಚಿದ್ದೇನೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಎಪಿಲ್ 2024: ಧೋನಿಗೆ ಮೊಣಕಾಲಿನದ್ದೇ ಚಿಂತೆ, ಇನ್ಮುಂದೆ ಕೀಪಿಂಗ್ ಕಷ್ಟ ಎಂದ ಸ್ನೇಹಿ