Select Your Language

Notifications

webdunia
webdunia
webdunia
webdunia

ತೃತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಸ್ಮಾಲ್ ಚೇಂಜ್!

ತೃತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಸ್ಮಾಲ್ ಚೇಂಜ್!
ಜೊಹಾನ್ಸ್ ಬರ್ಗ್ , ಮಂಗಳವಾರ, 23 ಜನವರಿ 2018 (08:50 IST)
ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧ ಮಾನ ಉಳಿಸಿಕೊಳ್ಳಲು ಟೀಂ ಇಂಡಿಯಾಕ್ಕೆ ಏಕೈಕ ಟೆಸ್ಟ್ ಪಂದ್ಯ ಬಾಕಿಯಿದ್ದು, ಅದನ್ನು ಗೆದ್ದು ನಂ.1 ಪಟ್ಟ ಉಳಿಸಿಕೊಳ್ಳುವ ಒತ್ತಡದಲ್ಲಿದೆ.
 

ಈ ಹಿನ್ನಲೆಯಲ್ಲಿ ಭಾರೀ ತಯಾರಿ ಮಾಡಿಕೊಳ್ಳುತ್ತಿರುವ ಟೀಂ ಇಂಡಿಯಾ ಆಟಗಾರರನ್ನೂ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಅಜಿಂಕ್ಯಾ ರೆಹಾನೆಯನ್ನು ಆಡಿಸದೇ ವಿರಾಟ್ ಕೊಹ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಎರಡೂ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ ಮೇಲೆ ಕೊಹ್ಲಿ ಹೆಚ್ಚುವರಿ ಬ್ಯಾಟ್ಸ್ ಮನ್ ಆಗಿ ರೆಹಾನೆಯನ್ನು ತಂಡದೊಳಕ್ಕೆ ಕರೆಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಸರಿಯಾಗಿ ರೆಹಾನೆ ಕೂಡಾ ನೆಟ್ಸ್ ನಲ್ಲಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ರೆಹಾನೆಗಾಗಿ ಯಾರು ಸ್ಥಾನ ಬಿಟ್ಟುಕೊಡುತ್ತಾರೆ ಎಂಬ ಅಂತಿಮ ಇಲೆವೆನ್ ಕುತೂಹಲ ಕೊನೆಯವರೆಗೂ ಉಳಿಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ದ.ಆಫ್ರಿಕಾ ಅಭ್ಯಾಸ ಪಿಚ್ ನೋಡಿ ಸಿಡಿದೆದ್ದ ಟೀಂ ಇಂಡಿಯಾ