Select Your Language

Notifications

webdunia
webdunia
webdunia
webdunia

ಕೆಕೆಆರ್‌ನಲ್ಲಿ ಅಕ್ರಮ ಹೂಡಿಕೆ: ಜಾರಿ ನಿರ್ದೇಶನಾಲಯದಿಂದ ಶಾರುಕ್‌ ಖಾನ್‌ಗೆ ಸಮನ್ಸ್

ಕೆಕೆಆರ್‌ನಲ್ಲಿ ಅಕ್ರಮ ಹೂಡಿಕೆ:  ಜಾರಿ ನಿರ್ದೇಶನಾಲಯದಿಂದ ಶಾರುಕ್‌ ಖಾನ್‌ಗೆ ಸಮನ್ಸ್
ಕೋಲ್ಕತಾ , ಗುರುವಾರ, 20 ಜುಲೈ 2017 (19:19 IST)
ನೈಟ್ ರೈಡರ್ಸ್ ಐಪಿಎಲ್ ತಂಡದಲ್ಲಿ ಅಕ್ರಮವಾಗಿ ಹೂಡಿಕೆ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಬಾಲಿವುಡ್ ನಟ, ಕೆಕೆಆರ್ ತಂಡದ ಮಾಲೀಕ ಶಾರುಕ್ ಖಾನ್‌ಗೆ ನೋಟಿಸ್ ಜಾರಿ ಮಾಡಿದೆ.
 
ವಿದೇಶ ವಿನಿಮಯ ಉಲ್ಲಂಘಿಸಿ ಕೆಕೆಆರ್‌ ಐಪಿಎಲ್ ತಂಡದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಲಾಗಿದೆ ಎಂದು ನೋಟಿಸ್‌ನಲ್ಲಿ ಶಾರುಕ್ ವಿರುದ್ಧ ಆರೋಪ ಹೊರಿಸಲಾಗಿದೆ.
 
ಜಾರಿ ನಿರ್ದೇಶನಾಲಯದ ಮುಂದೆ ಜುಲೈ 23 ರೊಳಗೆ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಇಲಾಖೆಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ಜಾರಿ ನಿರ್ದೇಶನಾಲಯ ನೋಟಿಸ್‌ನಿಂದ ಬಾಲಿವುಡ್ ನಟ ಶಾರುಕ್ ಸಂಕಷ್ಟವನ್ನು ಎದುರಿಸುವಂತಾಗಿದೆ.
 
ಐಪಿಎಲ್‌ನ ಕೆಕೆಆರ್ ತಂಡದಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸಿ ಹೂಡಿಕೆ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೊಗಳುವ ಭರದಲ್ಲಿ ನಗೆಪಾಟಲಿಗೀಡಾದ ಆರ್.ಅಶ್ವಿನ್