Select Your Language

Notifications

webdunia
webdunia
webdunia
webdunia

ರಿವ್ಯೂ ವೇಸ್ಟ್ ಮಾಡಿದ್ದಕ್ಕೆ ಬೈದ ರೋಹಿತ್ ಶರ್ಮಾ: ನಕ್ಕ ಕುಲದೀಪ್ ಯಾದವ್

ರಿವ್ಯೂ ವೇಸ್ಟ್ ಮಾಡಿದ್ದಕ್ಕೆ ಬೈದ ರೋಹಿತ್ ಶರ್ಮಾ: ನಕ್ಕ ಕುಲದೀಪ್ ಯಾದವ್
ಚೆನ್ನೈ , ಗುರುವಾರ, 23 ಮಾರ್ಚ್ 2023 (08:40 IST)
Photo Courtesy: Twitter
ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದ ವೇಳೆ ಕುಲದೀಪ್ ಯಾದವ್ ಮೇಲೆ ನಾಯಕ ರೋಹಿತ್ ಶರ್ಮಾ ಮೈದಾನದಲ್ಲಿ ಹುಸಿಮುನಿಸು ತೋರಿದ ಘಟನೆ ನಡೆದಿದೆ.

ಒಂದು ಹಂತದಲ್ಲಿ ತಮ್ಮ ಬೌಲಿಂಗ್ ನಲ್ಲಿ ರಿವ್ಯೂ ತೆಗೆದುಕೊಳ್ಳಲು ನಾಯಕ ರೋಹಿತ್ ನಿರಾಕರಿಸಿದಾಗ ಕುಲದೀಪ್ ಯಾದವ್ ರಿವ್ಯೂ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಕುಲದೀಪ್ ಒತ್ತಾಯಕ್ಕೆ ಮಣಿದು ರೋಹಿತ್ ರಿವ್ಯೂ ಪಡೆದರು. ಆದರೆ ಅದು ಯಶಸ್ವಿಯಾಗಲಿಲ್ಲ.

ಬಳಿಕ ರೋಹಿತ್ ತಮ್ಮ ಎಂದಿನ ಶೈಲಿಯಲ್ಲಿ ಕುಲದೀಪ್ ಮೇಲೆ ಹರಿಹಾಯ್ದರು. ಅವರು ಬೈದಿದ್ದಕ್ಕೆ ಕುಲದೀಪ್ ಮಾತ್ರವಲ್ಲ, ಪಕ್ಕದಲ್ಲಿದ್ದ ವಿರಾಟ್ ಕೊಹ್ಲಿಗೂ ನಗು ತಡೆಯಲಾಗಲಿಲ್ಲ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಸೋಲಿಗೆ ಮೂರು ಪ್ರಮುಖ ಕಾರಣಗಳು