Select Your Language

Notifications

webdunia
webdunia
webdunia
webdunia

ರಜಾ ಹಸನ್ ಡೋಪ್ ಟೆಸ್ಟ್‌ನಲ್ಲಿ ವಿಫಲ, ಪಿಸಿಬಿಯಿಂದ 2 ವರ್ಷ ನಿಷೇಧ

ರಜಾ ಹಸನ್ ಡೋಪ್ ಟೆಸ್ಟ್‌ನಲ್ಲಿ ವಿಫಲ, ಪಿಸಿಬಿಯಿಂದ 2 ವರ್ಷ ನಿಷೇಧ
ಕರಾಚಿ , ಬುಧವಾರ, 27 ಮೇ 2015 (10:16 IST)
ಈ ವರ್ಷಾರಂಭದಲ್ಲಿ  ಎಡಗೈ ಸ್ಪಿನ್ನರ್ ರಜಾ ಹಸನ್ ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲವಾಗಿರುವುದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎರಡು ವರ್ಷಗಳ ನಿಷೇಧವನ್ನು ವಿಧಿಸಿದೆ. ಉದ್ದೀಪನಾ ಮದ್ದು ನಿಯಮಗಳ ಪ್ರಕಾರ, ಮಾರ್ಚ್ 24ರಂದು ಪಿಸಿಬಿ ಅವರಿಗೆ ನೋಟಿಸ್ ನೀಡಿದೆ. ನಿಯಮಗಳ ಪ್ರಕಾರ, 14ದಿನಗಳೊಳಗೆ ವಿಚಾರಣೆಗೆ ಲಿಖಿತ ಮನವಿ ಸಲ್ಲಿಸಬೇಕಾಗಿದ್ದರೂ ಅವರು ಮನವಿ ಸಲ್ಲಿಸಲು ವಿಫಲರಾಗಿದ್ದರು.
 
 ನಿಷೇಧದ ಅವಧಿಯಲ್ಲಿ ಅವರು ಯಾವುದೇ ಕ್ರಿಕೆಟ್ ಪಂದ್ಯದಲ್ಲಿ ಅಥವಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಹೇಳಿಕೆ ತಿಳಿಸಿದೆ.ಪಾಕಿಸ್ತಾನದ ಪರ 10 ಟಿ20 ಪಂದ್ಯಗಳಲ್ಲಿ ಮತ್ತು ಏಕದಿನ ಪಂದ್ಯಗಳಲ್ಲಿ ಆಡಿದ್ದ ಹಸನ್ ಕರಾಚಿಯಲ್ಲಿನ ಪೆಂಟ್ಯಾಗ್ಯುಲರ್ ಏಕದಿನ ಕಪ್‌‌‌ನಲ್ಲಿ ಡೋಪಿಂಗ್ ಟೆಸ್ಟ್‌ನಲ್ಲಿ ವಿಫಲರಾಗಿದ್ದರು. ಈ ಪರೀಕ್ಷೆಯಲ್ಲಿ ಅವರು ಕೊಕೇನ್ ಸೇವನೆ ಮಾಡಿರುವುದು ಕಂಡುಬಂದಿತ್ತು. 
 
ಪಾಕಿಸ್ತಾನ ಆಟಗಾರ ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲವಾಗಿರುವುದು ಇದೇ ಮೊದಲಲ್ಲ. ಹಿಂದೆ ಕೂಡ ವೇಗದ ಬೌಲರ್‌‌ಗಳಾದ ಶೋಯಬ್ ಅಕ್ತರ್ ಮತ್ತು ಮಹಮ್ಮದ್ ಅಸೀಫ್ ಅವರನ್ನು  ಸಾಮರ್ಥ್ಯ ವರ್ಧನೆ ಪದಾರ್ಥಗಳನ್ನು ಬಳಸಿದ್ದಕ್ಕಾಗಿ ನಿಷೇಧಿಸಲಾಗಿತ್ತು. 

Share this Story:

Follow Webdunia kannada