Select Your Language

Notifications

webdunia
webdunia
webdunia
webdunia

ನಮ್ಮ ಬಾಬರ್ ಅಜಮ್ ಕೂಡಾ ವಿರಾಟ್ ಕೊಹ್ಲಿಗಿಂತ ಕಡಿಮೆಯೇನಲ್ಲ ಎಂದ ಪಾಕ್ ಕೋಚ್

ನಮ್ಮ ಬಾಬರ್ ಅಜಮ್ ಕೂಡಾ ವಿರಾಟ್ ಕೊಹ್ಲಿಗಿಂತ ಕಡಿಮೆಯೇನಲ್ಲ ಎಂದ ಪಾಕ್ ಕೋಚ್
ಇಸ್ಲಾಮಾಬಾದ್ , ಮಂಗಳವಾರ, 5 ಫೆಬ್ರವರಿ 2019 (09:54 IST)
ಇಸ್ಲಾಮಾಬಾದ್: ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್ ಮನ್ ಬಾಬರ್ ಅಜಮ್ ರನ್ನು ಹಿಂದಿನಿಂದಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಲಾಗುತ್ತದೆ. ಇದೀಗ ಬಾಬರ್ ಬಗ್ಗೆ ಪಾಕ್ ಕೋಚ್ ಮಿಕಿ ಆರ್ಥರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಬಾಬರ್ ಅಜಮ್ ವಿರಾಟ್ ಕೊಹ್ಲಿಯಷ್ಟು ಶ್ರೇಷ್ಠವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಮಿಕಿ ಆರ್ಥರ್, ‘ನಾನು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ. ಈತ ಕೊಹ್ಲಿಯಷ್ಟೇ ಶ್ರೇಷ್ಠನಾಗುತ್ತಾನೆ’ ಎಂದಿದ್ದಾರೆ.

‘ನಾನು ಬಾಬರ್ ನನ್ನು ಯುವಕನಾಗಿದ್ದಾಗಿನಿಂದಲೂ ನೋಡುತ್ತಿದ್ದೇನೆ. ಆತ ನೆಟ್ಸ್ ನಲ್ಲಿ ಕಠಿಣ ತಾಲೀಮು ನಡೆಸುವುದನ್ನು ನೋಡುತ್ತಾ ಬಂದಿದ್ದೇನೆ. ಆತ ಖಂಡಿತವಾಗಿಯೂ ಸದ್ಯದಲ್ಲೇ ವಿಶ್ವದ ಟಾಪ್ 5 ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬನಾಗುತ್ತಾನೆ. ಕೊಹ್ಲಿಯಷ್ಟೇ ರನ್ ಗಳಿಸುವ ಸಾಮರ್ಥ್ಯ ಹೊಂದಿರುವ ಬ್ಯಾಟ್ಸ್ ಮನ್’ ಎಂದು ಮಿಕಿ ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಲಿರುವ ರೋಹಿತ್ ಶರ್ಮಾ