Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಇಂದು ನಿಮ್ಮ ಸಪೋರ್ಟ್ ಕೊಹ್ಲಿಗಾ? ರೋಹಿತ್ ಶರ್ಮಾಗಾ

Virat Kohli-Rohit Sharma

Krishnaveni K

ಮುಂಬೈ , ಗುರುವಾರ, 11 ಏಪ್ರಿಲ್ 2024 (10:40 IST)
Photo Courtesy: Twitter
ಮುಂಬೈ: ಐಪಿಎಲ್ 2024 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿದೆ.

ಆದರೆ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಈ ಪಂದ್ಯ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಕದನ ಎಂಬ ಕಾರಣಕ್ಕೆ ವಿಶೇಷವಾಗಿದೆ. ಜಾಗತಿಕ ಕ್ರಿಕೆಟ್ ಮತ್ತು ಭಾರತೀಯ ಕ್ರಿಕೆಟ್ ನ ಹಾಲಿ ದಿಗ್ಗಜ ಕ್ರಿಕೆಟಿಗರು ಕೊಹ್ಲಿ ಮತ್ತು ರೋಹಿತ್. ಇಬ್ಬರಿಗೂ ಅವರದ್ದೇ ಆದ ಫ್ಯಾನ್ ಬೇಸ್ ಇದೆ.

ಆಗಾಗ ಇಬ್ಬರೂ ಸ್ಟಾರ್ ಕ್ರಿಕೆಟಿಗರ ಅಭಿಮಾನಿಗಳು ಕಿತ್ತಾಡುವುದೂ ಇದೆ. ಇದೀಗ ಈ ಇಬ್ಬರು ದಿಗ್ಗಜರು ವಿರುದ್ಧ ತಂಡಗಳಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ರೋಹಿತ್ ಗೆ ಇದು ತವರಿನ ನೆಲವಾದರೆ ಕೊಹ್ಲಿಯೂ ಕಳೆದ ಕೆಲವು ವರ್ಷದಿಂದ ಇಲ್ಲಿಯೇ ನೆಲೆಸಿರುವ ಕಾರಣಕ್ಕೆ ಅವರಿಗೂ ಇದು ಒಂದು ರೀತಿಯಲ್ಲಿ ತವರೇ.

ಸಹಜವಾಗಿ ರೋಹಿತ್ ಗೆ ಮುಂಬೈಯಲ್ಲಿ ಫ್ಯಾನ್ ಬೇಸ್ ಜಾಸ್ತಿ. ಹಾಗಂತ ಕೊಹ್ಲಿ ಏನೂ ಕಡಿಮೆಯೇನಲ್ಲ. ಅವರು ಎಲ್ಲೇ ಹೋದರೂ ಅಭಿಮಾನಿಗಳ ಜಯಕಾರ ಇದ್ದೇ ಇರುತ್ತದೆ. ಹೀಗಾಗಿ ಇಂದು ಅಭಿಮಾನಿಗಳ ಬೆಂಬಲ ಕೊಹ್ಲಿ ಕಡೆಗಿರುತ್ತದಾ ರೋಹಿತ್ ಶರ್ಮಾ ಕಡೆಗಿರುತ್ತದಾ ಎಂಬ ಕುತೂಹಲ ಎಲ್ಲರಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿಬಿ ನಡುವೆ ಇಂದು ರೋಮಾಂಚಕಾರಿ ಪಂದ್ಯ