Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಅಪರೂಪದ ಸಾಧನೆ ಮಾಡಲು 6 ರನ್ ದೂರವಿರುವ ವಿರಾಟ್ ಕೊಹ್ಲಿ

Virat Kohli

Krishnaveni K

ಬೆಂಗಳೂರು , ಶನಿವಾರ, 4 ಮೇ 2024 (16:30 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ಇಂದು ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿಯಲಿರುವ ಆರ್ ಸಿಬಿ ಬ್ಯಾಟಿಗ ವಿರಾಟ್ ಕೊಹ್ಲಿ ಅಪರೂಪದ ದಾಖಲೆಯೊಂದನ್ನು ಮಾಡಲಿದ್ದಾರೆ. ಅದಕ್ಕೆ ಅವರಿಗೆ ಬೇಕಾಗಿರುವುದು ಕೇವಲ 6 ರನ್ ಮಾತ್ರ.

ಈ ಐಪಿಎಲ್‍ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿರಾಶಾದಾಯಕ ಪ್ರದರ್ಶನ ನೀಡಿದ್ದು ಪ್ಲೇ ಆಫ್ ಗೆ ಅರ್ಹತೆ ಪಡೆಯುವುದು ಬಹುತೇಕ ಅನುಮಾನವಾಗಿದೆ. ಆದರೆ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾತ್ರ ಸಾಕಷ್ಟು ರನ್ ಗಳಿಸಿದ್ದು ಗರಿಷ್ಠ ರನ್ ಸ್ಕೋರ್ ಮಾಡಿ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಈ ಪಂದ್ಯದಲ್ಲಿ 6 ರನ್ ಗಳಿಸಿದರೆ ಟಿ20 ಕ್ರಿಕೆಟ್ ನಲ್ಲಿ 12,500 ರನ್ ಗಳಿಸಿದ ಭಾರತದ ಮೊದಲ ಬ್ಯಾಟಿಗ ಮತ್ತು ವಿಶ್ವದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಸದ್ಯಕ್ಕೆ ಕೊಹ್ಲಿ ಐಪಿಎಲ್, ರಾಷ್ಟ್ರೀಯ ತಂಡ ಸೇರಿದಂತೆ ಟಿ20 ಕ್ರಿಕೆಟ್ ನಲ್ಲಿ ಒಟ್ಟಾರೆ 12494 ರನ್ ಗಳಿಸಿದ್ದಾರೆ.

ಇದಕ್ಕಾಗಿ ಅವರು 9328 ಎಸೆತ ಎದುರಿಸಿದ್ದಾರೆ. ಒಟ್ಟು 369 ಇನಿಂಗ್ಸ್ ಆಡಿರುವ ಕೊಹ್ಲಿ 9 ಶತಕ, 95 ಅರ್ಧಶತಕ ಸೇರಿದಂತೆ 12494 ರನ್ ಗಳಿಸಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಕೊಹ್ಲಿ 10 ಇನಿಂಗ್ಸ್ ಗಳಿಂದ 1 ಶತಕ, 4 ಅರ್ಧಶತಕ ಸೇರಿದಂತೆ 500 ರನ್ ಗಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾ ಆಡುವಂತಿಲ್ಲ!