Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಸನ್ ರೈಸರ್ಸ್ ಗೆ ಪ್ಯಾಟ್ ಕ್ಯುಮಿನ್ಸ್ ನಾಯಕ

Pat Cummins

Krishnaveni K

ಹೈದರಾಬಾದ್ , ಸೋಮವಾರ, 4 ಮಾರ್ಚ್ 2024 (12:25 IST)
Photo Courtesy: Twitter
ಹೈದರಾಬಾದ್: ಐಪಿಎಲ್ 2024 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವವನ್ನು ಆಸ್ಟ್ರೇಲಿಯಾ ಮೂಲದ ಪ್ಯಾಟ್ ಕ್ಯುಮಿನ್ಸ್ ವಹಿಸಿಕೊಳ್ಳಲಿದ್ದಾರೆ. ಆಸೀಸ್ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಯಶಸ್ವೀ ನಾಯಕ ಪ್ಯಾಟ್ ಕ್ಯುಮಿನ್ಸ್.

ಈ ಬಾರಿ ಐಪಿಎಲ್ ನಲ್ಲಿ ಪ್ಯಾಟ್ ಕ್ಯುಮಿನ್ಸ್ ರನ್ನು ಸನ್ ರೈಸರ್ಸ್ ಹೈದರಾಬಾದ್ 20.5 ಕೋಟಿ ರೂ. ಕೊಟ್ಟು ಖರೀದಿ ಮಾಡಿತ್ತು. ಈ ಮೂಲಕ ಐಪಿಎಲ್ ನ ಎರಡನೇ ದುಬಾರಿ ಆಟಗಾರನಿಗೆ ಹೈದರಾಬಾದ್ ನಾಯಕನ ಪಟ್ಟ ನೀಡಿದೆ. ಈ ಮೂಲಕ ಕಳೆಗುಂದಿರುವ ಹೈದರಾಬಾದ್ ಗೆ ಹೊಸ ಬಲ ಸಿಗಬಹುದು ಎಂಬ ವಿಶ್ವಾಸದಲ್ಲಿದೆ.

ಕಳೆದ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ದ.ಆಫ್ರಿಕಾ ಮೂಲದ ಆಡನ್ ಮಾರ್ಕರಮ್ ನಾಯಕರಾಗಿದ್ದರು. ಆದರೆ ಹೈದರಾಬಾದ್ ಗೆ ಅಷ್ಟೊಂದು ಯಶಸ್ಸು ಸಿಕ್ಕಿರಲಿಲ್ಲ. ಈ ಬಾರಿ ಬಹುಶಃ ಉತ್ತಮ ನಾಯಕನನ್ನು ಆಯ್ಕೆ ಮಾಡುವ ಉದ್ದೇಶದಿಂದಲೇ ಹೈದರಾಬಾದ್ ಪ್ಯಾಟ್ ಕ್ಯುಮಿನ್ಸ್ ರನ್ನು ಭಾರೀ ಬೆಲೆ ತೆತ್ತು ಖರೀದಿ ಮಾಡಿತ್ತು.

ಕಳೆದ ಐಪಿಎಲ್ ನಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಪ್ಯಾಟ್ ಕ್ಯುಮಿನ್ಸ್ ಆಡಿರಲಿಲ್ಲ. ಈ ಬಾರಿ ಅವರು ಐಪಿಎಲ್ ನಲ್ಲಿ ಭಾರೀ ಬೆಲೆಗೆ ಬಿಕರಿಯಾದರು. ಆಸ್ಟ್ರೇಲಿಯಾ ತಂಡಕ್ಕೆ ಇತ್ತೀಚೆಗಿನ ವರ್ಷಗಳಲ್ಲಿ ನಾಯಕರಾಗಿ ಮಹತ್ವದ ಗೆಲುವು ತಂದುಕೊಟ್ಟಿದ್ದ ನಾಯಕ ಪ್ಯಾಟ್ ಕ್ಯುಮಿನ್ಸ್ ಈಗ ಹೈದರಾಬಾದ್ ಗೆ ಯಶಸ್ಸು ತಂದುಕೊಡುತ್ತಾರಾ ಕಾದುನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

IND vs ENG test: ಟೀಂ ಇಂಡಿಯಾ, ಇಂಗ್ಲೆಂಡ್ ಅಂತಿಮ ಟೆಸ್ಟ್ ನಡೆಯೋದೇ ಅನುಮಾನ