Select Your Language

Notifications

webdunia
webdunia
webdunia
webdunia

IPL 2024: ಐಪಿಎಲ್ ಇತಿಹಾಸದಲ್ಲಿ ಆರೆಂಜ್ ಕ್ಯಾಪ್ ಗೆದ್ದ ಭಾರತೀಯ ಕ್ರಿಕೆಟಿಗರು

IPL 2024

Krishnaveni K

ಮುಂಬೈ , ಶನಿವಾರ, 6 ಏಪ್ರಿಲ್ 2024 (11:27 IST)
ಮುಂಬೈ: ಐಪಿಎಲ್ 2024 ರ ಮಿನಿ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಶುರುವಾಗಿದೆ. ಇದಕ್ಕಿಂತ ಮೊದಲು ಇದುವರೆಗೆ ನಡೆದ ಐಪಿಎಲ್ ಕೂಟಗಳಲ್ಲಿ ಗರಿಷ್ಠ ರನ್ ಸ್ಕೋರ್ ಮಾಡಿ ಆರೆಂಜ್ ಕ್ಯಾಪ್ ಗೌರವ ಪಡೆದ ಆರು ಭಾರತೀಯ ಕ್ರಿಕೆಟಿಗರು ಯಾರು ನೋಡೋಣ.

ಸಚಿನ್ ತೆಂಡುಲ್ಕರ್: ಕ್ರಿಕೆಟ್ ನಲ್ಲಿ ಪ್ರಥಮ ಏನೇ ಇದ್ದರೂ ಅದು ಸಚಿನ್ ಹೆಸರಿನಲ್ಲಿಯೇ ಇರುತ್ತದೆ. ಈ ವಿಚಾರದಲ್ಲೂ ಹಾಗೇ. 2010 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಸಚಿನ್ 618 ರನ್ ಗಳಿಸಿ ಆರೆಂಜ್ ಕ್ಯಾಪ್ ಗೌರವ ಪಡೆದಿದ್ದರು.
ರಾಬಿನ್ ಉತ್ತಪ್ಪ: ಕೆಕೆಆರ್ ತಂಡದ ಆಟಗಾರನಾಗಿದ್ದ ರಾಬಿನ್ ಉತ್ತಪ್ಪ 2014 ರಲ್ಲಿ ಒಟ್ಟು 660 ರನ್ ಕಲೆ ಹಾಕಿ ಆರೆಂಜ್ ಕ್ಯಾಪ್ ಗೌರವ ಪಡೆದಿದ್ದರು.
ವಿರಾಟ್ ಕೊಹ್ಲಿ: ರನ್ ಮೆಷಿನ್, ಕಿಂಗ್ ಕೊಹ್ಲಿ 2016 ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾ ಬರೋಬ್ಬರಿ 973 ರನ್ ಕಲೆ ಹಾಕಿ ಆರೆಂಜ್ ಕ್ಯಾಪ್ ಧಾರಿಯಾಗಿದ್ದರು. ಇದರಲ್ಲಿ ನಾಲ್ಕು ಶತಕಗಳೂ ಸೇರಿವೆ.
ಕೆಎಲ್ ರಾಹುಲ್: ಕಿಂಗ್ಸ್ ಪಂಜಾಬ್ ತಂಡದ ಪರ ಆಡಿದ್ದ ಕೆಎಲ್ ರಾಹುಲ್ 2020 ರಲ್ಲಿ ಆರೆಂಜ್ ಕ್ಯಾಪ್ ಗೌರವ ಪಡೆದಿದ್ದರು. ಆ ಐಪಿಎಲ್ ನಲ್ಲಿ ಅವರು 670 ರನ್ ಒಟ್ಟುಗೂಡಿಸಿದ್ದರು.
ಋತುರಾಜ್ ಗಾಯಕ್ ವಾಡ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಋತುರಾಜ್ ಗಾಯಕ್ ವಾಡ್ 2021 ರ ಐಪಿಎಲ್ ನಲ್ಲಿ  635 ರನ್ ಗಳಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು.
ಶುಬ್ಮನ್ ಗಿಲ್: ಐಪಿಎಲ್ ಕಳೆದ ಸೀಸನ್ ನಲ್ಲಿ 890 ರನ್ ಕಲೆ ಹಾಕಿದ್ದ ಗುಜರಾತ್ ಟೈಟನ್ಸ್ ತಂಡದ ಶುಬ್ಮನ್ ಗಿಲ್ ಆರೆಂಜ್ ಕ್ಯಾಪ್ ಗೌರವ ಪಡೆಯುವ ಮೂಲಕ ಆರನೆಯ ಭಾರತೀಯ ಆಟಗಾರ ಎನಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಇಂದಾದರೂ ಸಿಗುತ್ತಾ ಗೆಲುವು