Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಜೋಸ್ ಬಟ್ಲರ್ ನಿಂದ ನಂಬಲಸಾಧ್ಯ ಗೆಲುವು ದಾಖಲಿಸಿದ ರಾಜಸ್ಥಾನ್ ರಾಯಲ್ಸ್

Jose Buttler

Krishnaveni K

ಕೋಲ್ಕೊತ್ತಾ , ಬುಧವಾರ, 17 ಏಪ್ರಿಲ್ 2024 (08:43 IST)
Photo Courtesy: Twitter
ಕೋಲ್ಕೊತ್ತಾ: ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತೊಂದು ಥ್ರಿಲ್ಲಿಂಗ್ ವಿಕ್ಟರಿ ತನ್ನದಾಗಿಸಿಕೊಂಡಿದೆ. ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಗೆಲುವು ಕಂಡಿದೆ. ಇದಕ್ಕೆ ಕಾರಣವಾಗಿದ್ದು ಜೋಸ್ ಬಟ್ಲರ್ ಶತಕದ ಇನಿಂಗ್ಸ್.

ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 223 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಕಾರಣವಾಗಿದ್ದು ಆರಂಭಿಕ ಸುನಿಲ್ ನರೈನ್ ಅವರ ಚೊಚ್ಚಲ ಐಪಿಎಲ್ ಶತಕ. ಕೇವಲ 56 ಎಸೆತಗಳಿಂದ ಸುನಿಲ್ 6 ಸಿಕ್ಸರ್ 13 ಬೌಂಡರಿ ಸಹಿತ 109 ರನ್ ಸಿಡಿಸಿದರು.

ಈ ಮೊತ್ತ ಬೆನ್ನತ್ತಿದ ರಾಜಸ್ಥಾನ್ ಒಂದು ಹಂತದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡು ಸೋಲಬಹುದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ತಂಡ 100 ರನ್ ಗಳಿಸುವಷ್ಟರಲ್ಲಿ ಯಶಸ್ವಿ ಜೈಸ್ವಾಲ್ 19, ಸಂಜು ಸ್ಯಾಮ್ಸನ್ 12, ರಿಯಾನ್ ಪರಾಗ್ 34 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದರು. 13 ನೇ ಓವರ್ ನಲ್ಲಿ ತಂಡ ಕೇವಲ 121 ರನ್ ಗಳಿಸಿ 6 ವಿಕೆಟ್ ಕೂಡಾ ಕಳೆದುಕೊಂಡಿತ್ತು. ಹೀಗಾಗಿ ಆರ್ ಆರ್ ಸೋಲುವ ಸ್ಥಿತಿಯಲ್ಲಿತ್ತು.

ಆದರೆ ಇನ್ನೊಂದೆಡೆ ಬಂಡೆಯಂತೆ ನಿಂತು ಆಡಿದ ಆರಂಭಿಕ ಜೋಸ್ ಬಟ್ಲರ್ ಕೊನೆಯವರೆಗೂ ಅಜೇಯರಾಗುಳಿದು ತಂಡಕ್ಕೆ ಗೆಲುವಿನ್ ರನ್ ಗಳಿಸಿಕೊಟ್ಟರು. ಅಂತಿಮ ಓವರ್ ನಲ್ಲಿ ರಾಜಸ್ಥಾನ್ ಗೆ 6 ಎಸೆತಗಳಿಂದ 9 ರನ್ ಬೇಕಾಗಿತ್ತು. ಮೊದಲ ಎಸೆತವನ್ನೇ ಸಿಕ್ಸರ್ ಗಟ್ಟಿದ ಬಟ್ಲರ್ ತಮ್ಮ ಶತಕ ಪೂರೈಸಿಕೊಂಡರು. ಇನ್ನು ರಾಜಸ್ಥಾನ್ ಮುಂದಿನ ಎಸೆತದಲ್ಲೇ ಗೆಲ್ಲಬಹುದೆಂದು ಎಲ್ಲರೂ ಅಂದುಕೊಂಡಿದ್ದರು.

ಆದರೆ ಮುಂದಿನ ಮೂರು ಎಸೆತಗಳಲ್ಲಿ ವರುಣ್ ಚಕ್ರವರ್ತಿ ಸತತವಾಗಿ ರನ್ ನೀಡದೇ ರೋಚಕತೆ ಹೆಚ್ಚಿಸಿದರು. ಇದೀಗ ಅಂತಿಮ 2 ಬಾಲ್ ನಿಂದ 3 ರನ್ ಬೇಕಾಗಿತ್ತು. ಐದನೇ ಎಸೆತದಲ್ಲಿ ಬಟ್ಲರ್ 2 ರನ್ ಗಳಿಸಿದರು. ಅಂತಿಮ ಎಸೆತದಲ್ಲಿ 1 ರನ್ ಗಳಿಸಿ ರೋಚಕ ಗೆಲುವು ತಮ್ಮದಾಗಿಸಿಕೊಂಡರು. ಈ ವೇಳೆ ರಾಜಸ್ಥಾನ್ ಆಟಗಾರರ ಸಂಭ್ರಮಕ್ಕೆ ಮೇರೆಯೇ ಇರಲಿಲ್ಲ. ಅಂತಿಮವಾಗಿ ರಾಜಸ್ಥಾನ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 224 ರನ್ ಗಳಿಸುವ ಮೂಲಕ 2 ವಿಕೆಟ್ ಗಳ ರೋಚಕ ಗೆಲುವು ತನ್ನದಾಗಿಸಿಕೊಂಡಿತು. ಇದೀಗ 7 ಪಂದ್ಯಗಳಿಂದ 6 ಗೆಲುವು ಕಂಡಿರುವ ರಾಜಸ್ಥಾನ್ ತನ್ನ ಅಗ್ರ ಪಟ್ಟವನ್ನು ಕಾಯ್ದುಕೊಂಡಿತು.

Share this Story:

Follow Webdunia kannada

ಮುಂದಿನ ಸುದ್ದಿ

ಟೇಬಲ್ ಟಾಪರ್ಸ್‌ಗಳ ನಡುವೆ ಕಾಳಗ ಶುರು: ಕೋಲ್ಕತ್ತ ವಿರುದ್ಧ ಟಾಸ್ ಗೆದ್ದ ರಾಯಲ್ಸ್‌, ಬೌಲಿಂಗ್ ಆಯ್ಕೆ