Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಆರ್ ಸಿಬಿ ವಿರುದ್ಧ ಆರಂಭಿಕ ಪಂದ್ಯವಾಡಿ ದಾಖಲೆ ಮಾಡಲಿರುವ ಸಿಎಸ್ ಕೆ

IPL 2024

Krishnaveni K

ಚೆನ್ನೈ , ಶುಕ್ರವಾರ, 22 ಮಾರ್ಚ್ 2024 (09:16 IST)
ಚೆನ್ನೈ: ಐಪಿಎಲ್ 2024 ಕ್ಕೆ ಇಂದು ಚಾಲನೆ ಸಿಗಲಿದೆ. ಆರಂಭಿಕ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗುತ್ತಿದೆ.

ವಿಶೇಷವೆಂದರೆ ಈ ಬಾರಿ ಉದ್ಘಾಟನಾ ಪಂದ್ಯದಲ್ಲಿ ಆಡುವ ಮೂಲಕ ಸಿಎಸ್ ಕೆ ದಾಖಲೆಯೊಂದನ್ನು ಮಾಡಲಿದೆ. ಇದು ದಾಖಲೆಯ ಒಂಭತ್ತನೇ ಬಾರಿಗೆ ಸಿಎಸ್ ಕೆ ಉದ್ಘಾಟನಾ ಪಂದ್ಯವಾಡುತ್ತಿದೆ. ಅದೂ ಈ ಬಾರಿ ಚೆನ್ನೈನಲ್ಲೇ ಪಂದ್ಯ ನಡೆಯುತ್ತಿರುವುದು ವಿಶೇಷ.

2009, 2011, 2012, 2018, 2019, 2022, 2023 ರಲ್ಲೂ ಸಿಎಸ್ ಕೆ ಉದ್ಘಾಟನಾ ಪಂದ್ಯಗಳನ್ನಾಡಿತ್ತು. ಧೋನಿ ನಾಯಕತ್ವ ತ್ಯಜಿಸಿದದರೂ ರುತುರಾಜ್ ಗಾಯಕ್ ವಾಡ್‍ ನೇತೃತ್ವದಲ್ಲಿ ಸಿಎಸ್ ಕೆ ಈ ಬಾರಿಯೂ ಬಲಿಷ್ಠ ತಂಡವಾಗಿದೆ. ಋತುರಜ್ ಗೆ ನಾಯಕರಾಗಿ ಇದು ಹೊಸ ಅನುಭವವಾಗಬಹುದು. ಧೋನಿ ಕಣಕ್ಕಿಳಿಯುತ್ತಾರಾ ಅಥವಾ ಮೆಂಟರ್ ಆಗಿ ಇರಬಹುದೇ ಎಂಬ ಕುತೂಹಲವಿದೆ. ಅದೇನೇ ಇದ್ದರೂ ಅವರು ತಂಡದಲ್ಲಿದ್ದರೇ ಶಕ್ತಿ. ಋತುರಾಜ್ ಗಾಯಕ್ ವಾಡ್, ರವೀಂದ್ರ ಜಡೇಜಾ, ಶ್ರಾದ್ಧೂಲ್ ಠಾಕೂರ್ ರಂತಹ ದೇಶೀಯ ಪ್ರತಿಭೆಗಳನ್ನೇ ಹೊಂದಿರುವ ಚೆನ್ನೈ ಬಲಿಷ್ಠ ತಂಡವಾಗಿದೆ.

ಆದರೆ ಆರ್ ಸಿಬಿ ಕೂಡಾ ಈ ಬಾರಿ ಹೊಸ ಆಟಗಾರರ ಸೇರ್ಪಡೆಯಿಂದ ಬಲಿಷ್ಠಗೊಂಡಿದೆ. ಅಲ್ಲದೆ, ಇತ್ತೀಚೆಗೆ ಮಹಿಳೆಯರು ಕಪ್ ಗೆದ್ದು ಪುರುಷರಲ್ಲೂ ಕಪ್ ಗೆಲ್ಲುವ ಉತ್ಸಾಹ ಹೆಚ್ಚಿಸಿದ್ದಾರೆ. ಈ ಬಾರಿ ನಾವು ಹೊಸ ಅಧ‍್ಯಾಯ ಪ್ರಾರಂಭಿಸಲಿದ್ದೇವೆ ಎಂದು ಕೊಹ್ಲಿ ಸುಳಿವು ನೀಡಿದ್ದಾರೆ. ನಾಯಕ ಫಾ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್ ತಂಡದ ಬ್ಯಾಟಿಂಗ್ ಶಕ್ತಿಗಳು. ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್, ಟಾಮ್ ಕ್ಯುರೇನ್, ಕ್ಯಾಮರೂನ್ ಗ್ರೀನ್ ಇದ್ದಾರೆ. ಈ ಪೈಕಿ ಗ್ರೀನ್ ಬ್ಯಾಟಿಂಗ್ ಕೂಡಾ ಮಾಡಬಲ್ಲರು. ಇದು ದಿನೇಶ್ ಕಾರ್ತಿಕ್ ಪಾಲಿಗೆ ಕೊನೆಯ ಐಪಿಎಲ್ ಆಗಿರುವುದರಿಂದ ವಿಕೆಟ್ ಕೀಪರ್ ಆಗಿ ಅವರಿಗೇ ಅವಕಾಶ ಸಿಗುವ ಸಾಧ‍್ಯತೆಯಿದೆ. ಇಂದಿನ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಜಿಯೋ ಸಿನಿಮಾದಲ್ಲಿ ನೇರಪ್ರಸಾರ ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024 ಕ್ಕೆ ಇಂದು ಚಾಲನೆ: ಉದ್ಘಾಟನೆಗೆ ಬರುವ ಅತಿಥಿಗಳ ಲಿಸ್ಟ್