Select Your Language

Notifications

webdunia
webdunia
webdunia
webdunia

ಐಪಿಎಲ್ 2024: ರೋಹಿತ್ ಎಂದು ಕೂಗಿ ಹಾರ್ದಿಕ್ ಪಾಂಡ್ಯಗೆ ಠಕ್ಕರ್ ಕೊಟ್ಟ ಪ್ರೇಕ್ಷಕರು

Rohit Sharma

Krishnaveni K

ಅಹಮ್ಮದಾಬಾದ್ , ಸೋಮವಾರ, 25 ಮಾರ್ಚ್ 2024 (09:18 IST)
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ನೂತನ ನಾಯಕ ಹಾರ್ದಿಕ್ ಪಾಂಡ್ಯಗೆ ಅಹಮ್ಮದಾಬಾದ್ ಪ್ರೇಕ್ಷಕರು ಠಕ್ಕರ್ ಕೊಟ್ಟಿದ್ದಾರೆ. ಮೈದಾನದಲ್ಲಿ ರೋಹಿತ್ ಹೆಸರೆತ್ತಿ ಕೂಗಿ ಹಾರ್ದಿಕ್ ರನ್ನು ಮೂದಲಿಸಿದ್ದಾರೆ.

ಈ ಬಾರಿ ಐಪಿಎಲ್ ಗೆ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಮುಂಬೈ ನಾಯಕತ್ವ ನೀಡಲಾಗಿತ್ತು. ಇದು ಬಹುತೇಕ ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ. ಸೋಷಿಯಲ್ ಮೀಡಿಯಾ ಮೂಲಕ ಹಾರ್ದಿಕ್ ಪಾಂಡ್ಯರನ್ನು ಟ್ರೋಲ್ ಮಾಡುತ್ತಲೇ ಇದ್ದರು.

ಇದೀಗ ನಿನ್ನೆಯ ಪಂದ್ಯದ ವೇಳೆ ರೋಹಿತ್ ಮೈದಾನದಲ್ಲಿ ಸಾಮಾನ್ಯ ಆಟಗಾರನಾಗಿದ್ದರೆ ಹಾರ್ದಿಕ್ ನಾಯಕನಾಗಿ ಟಾಸ್ ಗೆ ಬಂದಿದ್ದರು. ಈ ವೇಳೆ ಪ್ರೇಕ್ಷಕರು ಜೋರಾಗಿ ರೋಹಿತ್..ರೋಹಿತ್ ಎಂದು ಕೂಗಿ ಹಾರ್ದಿಕ್ ಗೆ ಠಕ್ಕರ್ ಕೊಟ್ಟಿದ್ದಾರೆ. ಇದು ಇಷ್ಟಕ್ಕೇ ನಿಲ್ಲಲಿಲ್ಲ.

ಮೈದಾನದಲ್ಲಿ ಮುಂಬೈ ಫೀಲ್ಡಿಂಗ್ ಮಾಡುವಾಗ ಪ್ರತೀ ಓವರ್ ಬಳಿಕವೂ ರೋಹಿತ್ ಹೆಸರೆತ್ತಿ ಕರೆದು ಹಾರ್ದಿಕ್ ಗೆ ಟಾಂಗ್ ಕೊಟ್ಟಿದ್ದಾರೆ. ವಿಶೇಷವಾಗಿ ಹಾರ್ದಿಕ್ ಬೌಲಿಂಗ್ ಮಾಡಲು ಹೊರಟಾಗಲೂ ಪ್ರೇಕ್ಷಕರು ರೋಹಿತ್ ಹೆಸರಿಡಿದು ಕರೆದು ಚಿಯರ್ ಅಪ್ ಮಾಡುತ್ತಿದ್ದುದು ಕಂಡುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಗುಜರಾತ್ ಟೈಟನ್ಸ್ ಗೆಲುವು, ಹಾರ್ದಿಕ್ ಪಾಂಡ್ಯಗೆ ಮುಖಭಂಗ