Select Your Language

Notifications

webdunia
webdunia
webdunia
webdunia

ನಕಲಿ ಡಿಗ್ರಿ ಸರ್ಟಿಫಿಕೇಟ್ ಕೊಟ್ಟು ವಂಚನೆ ಮಾಡಿದರೇ ಟೀಂ ಇಂಡಿಯಾ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್?

ನಕಲಿ ಡಿಗ್ರಿ ಸರ್ಟಿಫಿಕೇಟ್ ಕೊಟ್ಟು ವಂಚನೆ ಮಾಡಿದರೇ ಟೀಂ ಇಂಡಿಯಾ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್?
ನವದೆಹಲಿ , ಮಂಗಳವಾರ, 10 ಜುಲೈ 2018 (09:09 IST)
ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಹೊಸ ಸಂಚಲನ ಮೂಡಿಸಿದ್ದ ಹೊಡೆ ಬಡಿಯ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ವಿವಾದವೊಂದರಲ್ಲಿ ಸಿಲುಕಿದ್ದಾರೆ.

ಕ್ರಿಕೆಟ್ ನಲ್ಲಿ ಇವರ ಸಾಧನೆ ಗಮನಿಸಿ ಅವರ ಪದವಿಗೆ ತಕ್ಕಂತೆ ಪಂಜಾಬ್ ಪೊಲೀಸ್ ಇಲಾಖೆ ಅವರಿಗೆ ಡಿವೈಎಸ್ಪಿ ಹುದ್ದೆ ನೀಡಿತ್ತು. ಆದರೆ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿಯ ಪದವಿ ದಾಖಲೆ ಪತ್ರ ನಕಲಿ ಎಂದು ತಿಳಿದುಬಂದಿದ್ದು, ಇದೀಗ ಆಕೆಗೆ ನೀಡಿದ್ದ ಡಿವೈಎಸ್ಪಿ ಹುದ್ದೆಯನ್ನು ಪಂಜಾಬ್ ಪೊಲೀಸ್ ಇಲಾಖೆ ಹಿಂತೆಗೆದುಕೊಂಡಿದೆ.

ಆಕೆಯ ವಿದ್ಯಾಭ್ಯಾಸಕ್ಕೆ ಅನುಸಾರವಾಗಿ ಪೊಲೀಸ್ ಪೇದೆ ಹುದ್ದೆಯಷ್ಟೇ ನೀಡಬಹುದಷ್ಟೇ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹರ್ಮನ್ ಪ್ರೀತ್ ವಿವಾದದ ಬಗ್ಗೆ ನನಗೆ ಗೊತ್ತಾಗಿದೆ. ಸರ್ಕಾರ ಇದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಿದೆ. ನಾನು ಸಕಾರಾತ್ಮಕ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ ಎಂದಷ್ಟೇ ಹೇಳಿ ಜಾರಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೆಂದೂ ಮಾಡದ ಸಾಧನೆ ಮಾಡಿದ ಕೆಎಲ್ ರಾಹುಲ್