Select Your Language

Notifications

webdunia
webdunia
webdunia
webdunia

ಲಯನಲ್ ಮೆಸ್ಸಿ ಭೇಟಿಗೆ ಸಮುದ್ರದಲ್ಲಿ ಒಂದು ಕಿಮೀ ದೂರ ಈಜಿದ ಅಭಿಮಾನಿ

ಲಯನಲ್ ಮೆಸ್ಸಿ ಭೇಟಿಗೆ ಸಮುದ್ರದಲ್ಲಿ ಒಂದು ಕಿಮೀ ದೂರ ಈಜಿದ ಅಭಿಮಾನಿ
ನವದೆಹಲಿ: , ಬುಧವಾರ, 20 ಜುಲೈ 2016 (11:29 IST)
ಸರ್ವಕಾಲಿಕ ಶ್ರೇಷ್ಟ ಫುಟ್ಬಾಲ್ ಆಟಗಾರನ ಸಹಿ ಅಥವಾ ಚಿತ್ರ ಪಡೆಯವುದು ಈಗಾಗಲೇ ಸಾಧನೆಯಾಗಿದೆ. ಆದರೆ ಒಬ್ಬ ಅಭಿಮಾನಿ ಲಯನಲ್ ಮೆಸ್ಸಿಯನ್ನು ಮುಟ್ಟಲು ಒಂದು ಕಿಮೀ ದೂರ ಸಮುದ್ರದಲ್ಲಿ ಈಜಿ ಅವರ ಜತೆ 20 ನಿಮಿಷಗಳ ಕಾಲ ಚಾಟ್ ಮಾಡಿ ಸೆಲ್ಫೀ ತೆಗೆಸಿಕೊಂಡ ಮತ್ತು ಒಂದು ಗ್ಲಾಸ್ ತಂಪುಪಾನೀಯ ಸೇವಿಸಿದ.

2016-17ರ ಸೀಸನ್ ಇನ್ನೂ ಆರಂಭವಾಗಬೇಕಿದ್ದು, ಫುಟ್ಬಾಲ್ ಆಟಗಾರರು ರಜಾದಿನಗಳನ್ನು ಮೈದಾನದಿಂದ ಹೊರಗೆ ವಿಶ್ರಾಂತಿಗೆ ಮೀಸಲಿಟ್ಟಿದ್ದಾರೆ. ಮೆಸ್ಸಿ ತಮ್ಮ ಪುತ್ರ ಮತ್ತು ಪತ್ನಿಯೊಂದಿಗೆ ಇಬಿಜಾದ ಕಡಲತೀರದಲ್ಲಿ ವಿಹಾರದೋಣಿಯಲ್ಲಿ ತಂಗಿದ್ದರು. 
 
ಇತ್ತೀಚೆಗೆ ಇಬಿಜಾದಲ್ಲಿ ರಜಾದಿನ ಕಳೆಯುತ್ತಿದ್ದ ಮೆಸ್ಸಿ ಅಭಿಮಾನಿಯೊಬ್ಬ ಅದೇ ಸ್ಥಳದಲ್ಲಿ ತಮ್ಮ ನೆಚ್ಚಿನ ಕ್ರೀಡಾಪಟು ಕೂಡ ಇರುವುದನ್ನು ಪತ್ತೆಹಚ್ಚಿದ. ಇಂತಹ ಅವಕಾಶವನ್ನು ಮಿಸ್ ಮಾಡಿಕೊಳ್ಳಲು ಬಯಸದ ಅಭಿಮಾನಿ ಮೆಸ್ಸಿ ತಂಗಿದ್ದ ವಿಹಾರದ ದೋಣಿಯನ್ನು ಮುಟ್ಟಲು ಒಂದು ಕಿಮೀ ದೂರ ಸಮುದ್ರದಲ್ಲಿ ಈಜಿದ.
 
ಮೆಸ್ಸಿಗೆ ತಮ್ಮ ಅಭಿಮಾನಿಯ ಸಾಹಸದಿಂದ ಖುಷಿಯಾಗಿ ಅವನನ್ನು ದೋಣಿಗೆ ಆಹ್ವಾನಿಸಿದ. ಅಲ್ಲಿ ಸುಮಾರು 20 ನಿಮಿಷಗಳ ಕಾಲ ತನ್ನ ನೆಚ್ಚಿನ ಮೆಸ್ಸಿ ಜತೆ ಅಭಿಮಾನಿ ಕಳೆದ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಟೆಸ್ಟ್‌ಗೆ ಮುನ್ನ ನಾಲ್ಕು ಅಂಶಗಳು