Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಸೋತಿದ್ದಕ್ಕೆ ಭಾರತೀಯ ಪ್ರೇಕ್ಷಕರನ್ನು ಮೂದಲಿಸಿದ ಇಂಗ್ಲೆಂಡ್ ಅಭಿಮಾನಿಗಳು

ಟೀಂ ಇಂಡಿಯಾ ಸೋತಿದ್ದಕ್ಕೆ ಭಾರತೀಯ ಪ್ರೇಕ್ಷಕರನ್ನು ಮೂದಲಿಸಿದ ಇಂಗ್ಲೆಂಡ್ ಅಭಿಮಾನಿಗಳು
ಎಡ್ಜ್ ಬಾಸ್ಟನ್ , ಸೋಮವಾರ, 6 ಆಗಸ್ಟ್ 2018 (09:34 IST)
ಎಡ್ಜ್ ಬಾಸ್ಟನ್: ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿದ್ದಕ್ಕೆ ಇಂಗ್ಲೆಂಡ್ ಅಭಿಮಾನಿಗಳು ಭಾರತೀಯ ಪ್ರೇಕ್ಷಕರನ್ನು ಮೂದಲಿಸಿದ್ದಾರೆ.
 

ಮೂರನೇ ದಿನ ವಿರಾಟ್ ಕೊಹ್ಲಿ ಭಾರತದ ಗೆಲುವಿನ ಏಕೈಕ ಭರವಸೆಯ ಆಶಾಕಿರಣವಾಗಿದ್ದರು. ವಿರಾಟ್ ಕೊಹ್ಲಿ ಮೊದಲ ಇನಿಂಗ್ಸ್ ನಲ್ಲೂ ಏಕಾಂಗಿಯಾಗಿ ಹೋರಾಡಿದ್ದನ್ನು ನೋಡಿ ಭಾರತೀಯ ಬೆಂಬಲಿಗರು ಮೈದಾನದಲ್ಲೂ ಅವರ ಪರವಾಗಿ ಘೋಷಣೆ ಕೂಗುತ್ತಿದ್ದರು.

ಆದರೆ ದುರದೃಷ್ಟವಶಾತ್ ಕೊಹ್ಲಿಗೆ ತಂಡವನ್ನು ಗೆಲುವಿನ ದಡ ಮುಟ್ಟಿಸಲಾಗಲಿಲ್ಲ. ಹೀಗಾಗಿ ಸೋತ ಬಳಿಕ ಸಪ್ಪೆಯಾಗಿ ನಿಂತಿದ್ದ ಭಾರತೀಯ ಪ್ರೇಕ್ಷಕರತ್ತ ತಿರುಗಿದ ಇಂಗ್ಲೆಂಡ್ ಅಭಿಮಾನಿಗಳು ‘ಎಲ್ಲಿ ನಿಮ್ಮ ವಿರಾಟ್ ಕೊಹ್ಲಿ’ ಎಂದು ಘೋಷಣೆ ಕೂಗಿ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.                      

Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್ ಸೋತರೇನಂತೆ? ವಿರಾಟ್ ಕೊಹ್ಲಿ ಯಾವತ್ತಿಗೂ ಕಿಂಗ್!