Select Your Language

Notifications

webdunia
webdunia
webdunia
webdunia

ಯುವ ಕ್ರಿಕೆಟಿಗರಿಗೆ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ರೇಗಿಂಗ್!

ಯುವ ಕ್ರಿಕೆಟಿಗರಿಗೆ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ರೇಗಿಂಗ್!
ಕಾರ್ಡಿಫ್ , ಶುಕ್ರವಾರ, 6 ಜುಲೈ 2018 (10:01 IST)
ಕಾರ್ಡಿಫ್: ಟೀಂ ಇಂಡಿಯಾದಲ್ಲಿ ಯಾರೇ ಹೊಸಬರು ಬಂದರೂ ಹಿರಿಯ ಆಟಗಾರರು ರೇಗಿಂಗ್ ಮಾಡಿ ವೆಲ್ ಕಮ್ ಮಾಡುತ್ತಾರೆ ಎಂದು ಸ್ವತಃ ವಿರಾಟ್ ಕೊಹ್ಲಿ ಹಿಂದೊಮ್ಮೆ ಹೇಳಿದ್ದರು. ಅಂತಹದ್ದೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 

ಇಂಗ್ಲೆಂಡ್ ಸರಣಿಗೆ ಇದೇ ಮೊದಲ ಬಾರಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿರುವ ಹೊಸಬರಾದ ಕೃಣಾಲ್ ಪಾಂಡ್ಯ ಮತ್ತು ದೀಪಕ್ ಚಹರ್ ಗೆ ಹಿರಿಯ ಆಟಗಾರರು ರೇಗಿಂಗ್ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದರಲ್ಲಿ ದೀಪಕ್ ಮತ್ತು ಕೃಣಾಲ್ ರನ್ನು ಕುರ್ಚಿ ಮೇಲೆ ನಿಲ್ಲಿಸಿ ತಮ್ಮನ್ನು ತಾವು ಪರಿಚಯ ಮಾಡಿಕೊಳ್ಳಲು ಹೇಳಲಾಗುತ್ತಿದೆ. ಅದರಂತೆ ಇಬ್ಬರೂ ಕುರ್ಚಿ ಮೇಲೆ ಕೈ ಕಟ್ಟಿ ನಿಂತು ತಮ್ಮ ಪರಿಚಯ ಮಾಡಿಕೊಳ್ಳುತ್ತಿದ್ದಾರೆ.

webdunia
ದೃಶ್ಯದಲ್ಲಿ ಕೋಚ್ ರವಿಶಾಸ್ತ್ರಿ ಕೂಡಾ ಕಂಡುಬರುತ್ತಿದ್ದಾರೆ. ಇನ್ನು, ಬೇರೆ ಆಟಗಾರರು ಏನು ಹೇಳಬೇಕೆಂದು ನಿರ್ದೇಶಿಸುತ್ತಿರುವ ಧ್ವನಿ ಕೂಡಾ ಕೇಳಿಬರುತ್ತಿದೆ. ಅಂತೂ ಹೊಸ ಆಟಗಾರರಿಗೆ ಹಿರಿಯ ಆಟಗಾರರು ಯಾವ ರೀತಿ ನಡೆಸಿಕೊಳ್ಳುತ್ತಾರೆ ಎನ್ನುವುದು ಈ ವಿಡಿಯೋದಿಂದ ಬಹಿರಂಗವಾಗಿದೆ.



ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ವಿರುದ್ಧ ಸೋತರೂ ಇಂಗ್ಲೆಂಡ್ ಕ್ರಿಕೆಟಿಗರು ಸಂಭ್ರಮಿಸಿದ್ದು ಏಕೆ?