Select Your Language

Notifications

webdunia
webdunia
webdunia
webdunia

ಏಷ್ಯನ್ ಗೇಮ್ಸ್ ಕ್ರಿಕೆಟ್: ಚಿನ್ನ ಗೆಲ್ಲಲು ಹೊರಟ ಟೀಂ ಇಂಡಿಯಾ

ಏಷ್ಯನ್ ಗೇಮ್ಸ್ ಕ್ರಿಕೆಟ್: ಚಿನ್ನ ಗೆಲ್ಲಲು ಹೊರಟ ಟೀಂ ಇಂಡಿಯಾ
ಹ್ಯಾಂಗ್ ಝೂ , ಶನಿವಾರ, 7 ಅಕ್ಟೋಬರ್ 2023 (08:20 IST)
ಹ್ಯಾಂಗ್ ಝೂ: ಏಷ್ಯನ್ ಗೇಮ್ಸ್ ಕ್ರಿಕೆಟ್ ನಲ್ಲಿ ಭಾರತದ ಮಹಿಳೆಯರ ಬಳಿಕ ಇದೀಗ ಪುರುಷರ ಕ್ರಿಕೆಟ್ ತಂಡ ಬಂಗಾರದ ಪದಕ ತನ್ನದಾಗಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ಇಂದು ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಸೆಮಿಫೈನಲ್ ನಲ್ಲಿ ಬಾಂಗ್ಲಾದೇಶವನ್ನು ಬಗ್ಗುಬಡಿದ ಋತುರಾಜ್ ಗಾಯಕ್ ವಾಡ್ ನೇತೃತ್ವದ ಟೀಂ ಇಂಡಿಯಾ ಫೈನಲ್ ಗೇರಿತ್ತು. ಇದೀಗ ಫೈನಲ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಫೈನಲ್ ಗೇರಿರುವ ಅಫ್ಘಾನಿಸ್ತಾನವನ್ನು ಎದುರಿಸಲಿದೆ.

ಟೂರ್ನಿಯುದ್ದಕ್ಕೂ ಭಾರತವೇ ಮೇಲುಗೈ ಸಾಧಿಸಿದೆ. ಹೀಗಾಗಿ ಇಂದೂ ಗೆಲ್ಲುವ ಮೆಚ್ಚಿನ ತಂಡ ಭಾರತವೇ ಆಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಂಘಟಿತ ಪ್ರದರ್ಶನ ನೀಡುತ್ತಿರುವುದು ಭಾರತದ ಪ್ಲಸ್ ಪಾಯಿಂಟ್. ಈ ಪಂದ್ಯ ಮಧ್ಯಾಹ್ನ 11.30 ಕ್ಕೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯನ್ ಗೇಮ್ಸ್: ಹಾಕಿಯಲ್ಲಿ ಚಿನ್ನ, ಅಭಿನಂದನೆಗಳ ಸುರಿಮಳೆ