Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಫೈನಲ್ ಗೇರದ್ದಕ್ಕೆ ತಮ್ಮದೇ ದೇಶದ ತಂಡವನ್ನು ಅಭಿನಂದಿಸಿದ ಪಾಕ್ ಕ್ರಿಕೆಟ್ ಅಭಿಮಾನಿಗಳು!

ಏಷ್ಯಾ ಕಪ್ ಫೈನಲ್ ಗೇರದ್ದಕ್ಕೆ ತಮ್ಮದೇ ದೇಶದ ತಂಡವನ್ನು ಅಭಿನಂದಿಸಿದ ಪಾಕ್ ಕ್ರಿಕೆಟ್ ಅಭಿಮಾನಿಗಳು!
ದುಬೈ , ಶುಕ್ರವಾರ, 28 ಸೆಪ್ಟಂಬರ್ 2018 (08:56 IST)
ದುಬೈ: ಸದ್ಯ ಪಾಕಿಸ್ತಾನ ಏಷ್ಯಾ ಕಪ್ ಫೈನಲ್ ಗೆ ತಲುಪಿಲ್ಲವಲ್ಲ! ಹೀಗಂತ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳೇ ವ್ಯಂಗ್ಯವಾಗಿ ಅಭಿನಂದಿಸುತ್ತಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಸೂಪರ್ ಫೋರ್ ಹಂತದಲ್ಲಿ ಸೋತು ಕೂಟದಿಂದ ನಿರ್ಗಮಿಸಿದ ಪಾಕಿಸ್ತಾನ ಫೈನಲ್ ತಲುಪಲಿಲ್ಲ. ಒಂದು ವೇಳೆ ಫೈನಲ್ ಗೇರಿದ್ದರೆ ಭಾರತದ ಜತೆ ಸೆಣಸಾಡಸಬೇಕಿತ್ತು.

ಈಗಾಗಲೇ ಏಷ್ಯಾ ಕಪ್ ಕೂಟದಲ್ಲಿ ಭಾರತ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿದೆ. ಒಂದು ವೇಳೆ ಫೈನಲ್ ತಲುಪಿದ್ದರೆ ಮತ್ತೊಮ್ಮೆ ಒಂದೇ ಕೂಟದಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಬೇಕಾಗಿತ್ತು. ಸದ್ಯಕ್ಕೆ ಆ ಅವಮಾನ ಇಲ್ಲವಲ್ಲ. ಅದೇ ಸಮಾಧಾನ ಎಂದು ಪಾಕ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಗಿ ತಂಡವನ್ನು ಲೇವಡಿ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮೈದಾನದಲ್ಲಿ ತಪ್ಪು ಮಾಡಿದ ಕೆಎಲ್ ರಾಹುಲ್ ಮೇಲೆ ಅಭಿಮಾನಿಗಳ ಸಿಟ್ಟು