Select Your Language

Notifications

webdunia
webdunia
webdunia
webdunia

ಐಪಿಎಲ್ ನಲ್ಲಿ ಚೆನ್ನಾಗಿ ಆಡಿದ್ರೆ ಸಾಕು, ವಿಶ್ವಕಪ್ ಸ್ಥಾನ ತಾನಾಗಿಯೇ ಸಿಗುತ್ತೆ!

ಐಪಿಎಲ್ ನಲ್ಲಿ ಚೆನ್ನಾಗಿ ಆಡಿದ್ರೆ ಸಾಕು, ವಿಶ್ವಕಪ್ ಸ್ಥಾನ ತಾನಾಗಿಯೇ ಸಿಗುತ್ತೆ!
ಮುಂಬೈ , ಭಾನುವಾರ, 17 ಮಾರ್ಚ್ 2019 (08:54 IST)
ಮುಂಬೈ: ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಬೇಕಾದರೆ ಐಪಿಎಲ್ ಮಾನದಂಡವಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದರೂ ಟೀಂ ಇಂಡಿಯಾ ಕ್ರಿಕೆಟಿಗ ಅಜಿಂಕ್ಯಾ ರೆಹಾನೆ ಐಪಿಎಲ್ ಪ್ರದರ್ಶನದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.


ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಬೇಕಾದರೆ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಸಾಕು ಎಂದು ಅವರು ಹೇಳಿದ್ದಾರೆ. ಸದ್ಯಕ್ಕೆ ರೆಹಾನೆ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸುವುದು ಅನುಮಾನ.

ಹಾಗಿದ್ದರೂ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ವಿಶ್ವಕಪ್ ನಲ್ಲಿ ತಾನಾಗಿಯೇ ಸ್ಥಾನ ಸಿಗುತ್ತದೆ ಎಂದು ರೆಹಾನೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ನಂ.4 ಕ್ರಮಾಂಕಕ್ಕೆ ಬ್ಯಾಟ್ಸ್ ಮನ್ ಸ್ಥಾನ ಖಾಲಿ ಇದೆ. ರೆಹಾನೆ ಅಂದುಕೊಂಡಂತೆ ಐಪಿಎಲ್ ನಲ್ಲಿ ಆಡಿದರೆ ಆ ಸ್ಥಾನ ಅವರಿಗೇ ಸಿಕ್ಕರೂ ಅಚ್ಚರಿಯಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕೇ ತಿಂಗಳಿಗೆ 22 ಕೆಜಿ ತೂಕ ಇಳಿಸಿಕೊಂಡ ಸಾನಿಯಾ ಮಿರ್ಜಾ!