Select Your Language

Notifications

webdunia
webdunia
webdunia
webdunia

ಬೆಳ್ಳಿತೆರೆಯ ಮೇಲೆ ಬರಲಿದೆ ಉದ್ದಮ್ ಸಿಂಗ್ ಕಥೆ

ಬೆಳ್ಳಿತೆರೆಯ ಮೇಲೆ ಬರಲಿದೆ ಉದ್ದಮ್ ಸಿಂಗ್ ಕಥೆ
Mumbai , ಬುಧವಾರ, 11 ಜನವರಿ 2017 (11:19 IST)
ಸಾಮಾಜಿಕ ಅಂಶಗಳನ್ನು ತೆರೆಯ ಮೇಲೆ ತೋರಿಸುವುದರಲ್ಲಿ ಬಾಲಿವುಡ್ ನಿರ್ದೇಶಕ ಸೂಜಿತ್ ಸಿರ್ಕಾರ್ ಎತ್ತಿದ ಕೈ. ಸೂಜಿತ್ ಅವರ ಪಿಂಕ್ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್ ಹಿಟ್ ಸಾಧಿಸಿದ್ದು ಗೊತ್ತೇ ಇದೆ. ಈಗ ಇನ್ನೊಂದು ಚಿತ್ರಕ್ಕೆ ರೆಡಿಯಾಗಿದ್ದಾರೆ ಸೂಜಿತ್.
 
ಈ ಬಾರಿ ಪ್ರಮುಖ ಕ್ರಾಂತಿಕಾರ ಉದ್ದಮ್ ಸಿಂಗ್ ಬಯೋಪಿಕ್ ಕೈಗೆತ್ತಿಕೊಂಡಿದ್ದಾರೆ. ತನ್ನ 19ನೇ ವರ್ಷಕ್ಕೆ ಮುಂಬೈಗೆ ಬಂದಿಳಿದಾಗಿನಿಂದ ಉದ್ದಮ್ ಸಿನಿಮಾ ಮಾಡಬೇಕೆಂದು ಸೂಜಿತ್ ಕನಸು ಕಾಣುತ್ತಿದ್ದರಂತೆ. ನಿರ್ದೇಶಕನಾಗಿ ತನ್ನ ಮೊದಲ ಚಿತ್ರ ಉದ್ದಮ್ ಸಿಂಗ್ ಜೀವನಕಥೆಯಾಧಾರವಾಗಿಯೇ ತೆರೆಗೆ ಬರಬೇಕೆಂದು ಕೊಂಡಿದ್ದರಂತೆ.
 
ಆದರೆ ಬೇರೆ ಪ್ರಾಜೆಕ್ಟ್‌ಗಳ ಕಾರಣ ಆ ಚಿತ್ರ ಮಾಡಲು ಸಾಧ್ಯವಾಗಿರಲಿಲ್ಲವಂತೆ. ಭಾರತಕ್ಕೆ ಸ್ವಾತಂತ್ರ್ಯ ಬರುವುದಕ್ಕೂ ಮುಂದಿನ ಕಥೆಯಾದ್ದರಿಂದ ತೆರೆಗೆ ತರುವುದು ಸ್ವಲ್ಪ ಕಷ್ಟದ ಕೆಲಸ ಎನ್ನುತ್ತಿದ್ದಾರೆ ಸೂಜಿತ್. 1919ರಲ್ಲಿ ಅಮೃತಸರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದಾಗ ಇದಕ್ಕೆ ಪ್ರತೀಕಾರವಾಗಿ ಉದ್ದಮ್ ಸಿಂಗ್...ಕೆಲವು ವರ್ಷಗಳ ಬಳಿಕ ಮಾಜಿ ಜನೆರಲ್ ಡಯರ್‌ನನ್ನು 1940ರಲ್ಲಿ ಗುಂಡು ಹಾರಿಸಿ ಸಾಯಿಸುತ್ತಾನೆ.
 
1990ರಲ್ಲಿ ಜಲಿಯನ್ ವಾಲಾಬಾಗ್‌ಗೆ ಭೇಟಿ ನೀಡಿದಾಗ ಇಲ್ಲಿ ನಡೆದದ್ದಾದರೂ ಏನು ಎಂಬು ತಿಳಿದುಕೊಂಡ ಬಳಿಕ ಸಿನಿಮಾ ಮಾಡಬೇಕೆಂಬ ಆಸೆ ಚಿಗುರಿತಂತೆ. ಸ್ವಾತಂತ್ರ್ಯ ಸಮರ ಯೋಧರಲ್ಲಿ ಉದ್ದಮ್ ಸಿಂಗ್ ಪಾತ್ರ ಗಮನಾರ್ಹವಾದದ್ದು, ಆದರೆ ಇಂದಿನ ಯುವಜನತೆಗೆ ಅವರ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಸಿನಿಮಾ ಮೂಲಕ ಇಂದಿನ ತಲೆಮಾರಿಗೆ ತಿಳಿಸಬೇಕಿಂದಿದ್ದಾರೆ. ಉದ್ದಮ್ ಸಿಂಗ್ ಪಾತ್ರ ಯಾರು ಪೋಷಿಸುತ್ತಾರೆ ಎಂಬುದು ಇನ್ನೂ ಗೊತ್ತಾಗಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಶ್ರುತಿ ಹಾಸನ್‌ಗೆ ನಿದ್ದೆ ಇಲ್ಲದಂತೆ ಮಾಡುತ್ತಿರುವ ಗೆಳೆಯ