Select Your Language

Notifications

webdunia
webdunia
webdunia
webdunia

ಇಂದು 'ಸರಬ್ಜಿತ್' ಚಿತ್ರ ರಿಲೀಸ್

ಇಂದು 'ಸರಬ್ಜಿತ್' ಚಿತ್ರ ರಿಲೀಸ್
ಮುಂಬೈ , ಶುಕ್ರವಾರ, 20 ಮೇ 2016 (10:46 IST)
ಬಹುನಿರೀಕ್ಷಿತ ಚಿತ್ರ' ಸರಬ್ಜಿತ' ಇಂದು ರಿಲೀಸ್ ಆಗುತ್ತಿದೆ.. ರಂದೀಪ್ ಹೂಡಾ ಹಾಗೂ ಐಶ್ವರ್ಯ ರೈ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಚಿತ್ರದ ಫಸ್ಟ್ ಶೋ ಆರಂಭಗೊಳ್ಳಲಿದೆ. 'ಸರಬ್ಜಿತ್' ಚಿತ್ರ ನೋಡಲು ಪ್ರೇಕ್ಷಕರು ಕಾದು ಕುಳಿತಿದ್ದಾರೆ. 
ಲೀಡ್ ರೋಲ್‌ನಲ್ಲಿ ಮಿಂಚಿರುವ ಐಶ್ವರ್ಯ ರೈ ಹಾಗೂ ರಂದೀಪ್ ಅಭಿನಯ ಸಖತ್ ಎಮೋಷನಲ್ ಫೀಲ್ ಮೂಡಿಸುತ್ತದೆ.. ಇನ್ನೂ ಚಿತ್ರದಲ್ಲಿ ಐಶ್ವರ್ಯ ರೈ ಅವರ ನಟನೆ ಎಲ್ಲರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ.ಇನ್ನೂ ಈ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ಅಮಲ್ ಮಲ್ಲಿಕ್ , ಸಾಹಿಲ್ ಪ್ರಿತೇಶ್, ತನಿಶ್ಕಾ ಬೇಚಿ, ಶಶಿ ಮೊದಲಾದವರು...
 
ಮುಖ್ಯ ಪಾತ್ರದಲ್ಲಿ ರಂದೀಪ್ ಹೂಡಾ ಹಾಗೂ ಐಶ್ವರ್ಯ ರೈ ಬಚ್ಚನ್ ಅವರ ಕಾಂಬಿನೇಷನ್ ಪ್ರೇಕ್ಷಕರನ್ನು ತನ್ನತ್ತ ಸೆಳೆಯದೇ ಇರದು.. ಇವರರಿಬ್ಬರ ನಟನೆ ನಿಜಕ್ಕೂ ಈ ಚಿತ್ರದಲ್ಲಿ ಸುಂದರವಾಗಿ ಮೂಡಿ ಬಂದಿದೆ.
 
ನಿರ್ದೇಶಕ ಓಮಂಗ್ ಅವರ ಸರಬ್ಜಿತ್ ಚಿತ್ರ  ಕಥಾ ವಸ್ತು ಅದ್ಭೂತವಾಗಿ ಹೆಣಯಲಾಗಿದೆ. ಅದಕ್ಕಾಗಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ. ಇನ್ನೂ ಅರ್ಜಿತ್ ಸಿಂಗ್, ತುಲಸಿ ಕುಮಾರ್ ಹಾಗೂ ಸೋನು ನಿಗಂ ಈ ಚಿತ್ರಕ್ಕೆ ಹಾಡು ಹಾಡಿದ್ದಾರೆ. ಸೋನು ನಿಗಂ ಹಾಗೂ ಅರ್ಜಿತ್ ಧ್ವನಿ ನಿಮ್ಮ ಹೃದಯ ತಟ್ಟದೇ ಇರದು.
 
ಸರಬ್ಜಿತ್ ಚಿತ್ರ ಐಶ್ವರ್ಯ ಅವರಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ ಎನ್ನಲಾಗಿದೆ..

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಕ್ಕೆ ಬರುತ್ತಿದ್ದಾರೆ ರಸೆಲ್ ಪೂಕುಟ್ಟಿ