Select Your Language

Notifications

webdunia
webdunia
webdunia
webdunia

ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾದ ನಟಿ ಪ್ರೀತಿ ಜಿಂಟಾ ಸಹೋದರ

ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾದ ನಟಿ ಪ್ರೀತಿ ಜಿಂಟಾ ಸಹೋದರ
ಶಿಮ್ಲಾ , ಶನಿವಾರ, 3 ಡಿಸೆಂಬರ್ 2016 (16:41 IST)
ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಹೋದರ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ

ಜಿಂಟಾ ಸಹೋದಪ ನಿತೀನ್ ಚೌಹಾನ್, ಸೆಕ್ಟರ್ 2 ರ ಬಳಿ ತನ್ನ ವಾಹನದಲ್ಲಿಯೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಮಾಧ್ಯಮ ವರದಿಗಳ ಪ್ರಕಾರ, ಪೊಲೀಸರಿಗೆ ನಿತೀನ್ ಬಳಿ ಎರಡು ಸೂಸೈಡ್ ನೋಟುಗಳು ದೊರಕಿದ್ದು, ತನ್ನ ಸಾವಿಗೆ ಪತ್ನಿ ಮತ್ತು ಆಕೆಯ ಕುಟುಂಬದವರು ಕಾರಣ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.
 
ಕಳೆದ ಎರಡು ವರ್ಷಗಳ ಹಿಂದೆ ನಿತೀನ್ ಚೌಹಾನ್ ಮತ್ತು ಅವರ ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಅವರ ವಿಚ್ಚೇದನ ಅರ್ಜಿ ಶುಕ್ರವಾರದಂದು ನ್ಯಾಯಾಲಯದ ಮುಂದೆ ಇತ್ಯರ್ಥವಾಗಲಿತ್ತು. ಪತ್ನಿಯ ಪೋಷಕರು ತನ್ನ ಮಗನನ್ನು ಕೂಡಾ ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದು ಸೂಸೈಡ್ ನೋಟ್‌ನಲ್ಲಿ ದಾಖಲಿಸಿದ್ದಾನೆ.
 
ಪ್ರಸ್ತುತ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಜೊತೆಗೆ ಮತ್ತೆ ರಾಕ್ ಲೈನ್ ಸಿನಿಮಾ