Select Your Language

Notifications

webdunia
webdunia
webdunia
webdunia

ಮಾಲ್ಡೀವ್ಸ್‌ನಲ್ಲಿ ಮಸ್ತಿ ಮಾಡುತ್ತಿರುವ ..!!

ಮಾಲ್ಡೀವ್ಸ್‌ನಲ್ಲಿ ಮಸ್ತಿ ಮಾಡುತ್ತಿರುವ  ..!!
ಬೆಂಗಳೂರು , ಸೋಮವಾರ, 3 ಸೆಪ್ಟಂಬರ್ 2018 (17:07 IST)
ಕರೀನಾ ಕಪೂರ್, ಸೈಫ್ ಅಲಿ ಖಾನ್, ತೈಮುರ್, ಸೋಹಾ ಅಲಿ ಖಾನ್, ಕುನಾಲ್ ಕೆಮ್ಮು ಮತ್ತು ಇನಾಯಾ ಮಾಲ್ಡೀವ್ಸ್‌ನಲ್ಲಿ ಉತ್ತಮ ಸಮಯವನ್ನು ಕಳೆದಿದ್ದಾರೆ. ಸೋಹಾ ಮತ್ತು ಅವರ ಪತಿ ಕುನಾಲ್ ಪಟೌಡಿ ಕುಟುಂಬದ ಈ ಸಂತಸದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದು ಎಲ್ಲರೂ ಅದನ್ನು ಇಷ್ಟಪಡುತ್ತಿದ್ದಾರೆ.
ಈಗಾಗಲೇ ಕರೀನಾ ಕಪೂರ್, ಸೈಫ್ ಹಾಗೂ ತೈಮೂರ್ ಅವರು ಮಾಲ್ಡೀವ್ಸ್‌ಗೆ ಹೋಗುತ್ತಿರುವ ಫೋಟೋಗಳನ್ನು ನಾವು ನೋಡಿದ್ದೇವೆ, ಆದರೆ ಅವರು ಒಂಟಿಯಾಗಿ ಹೋಗಿಲ್ಲ. ಸೈಫ್ ಸಹೋದರಿ ಸೋಹಾ ಅಲಿ ಖಾನ್, ಮಗಳು ಇಯಾನಾ ಮತ್ತು ಪತಿ ಕುನಾಲ್ ಕೆಮ್ಮು ಅವರಿಗೆ ಜೊತೆಯಾಗಿದ್ದಾರೆ. ಕುನಾಲ್ ಹಾಗೂ ಸೋಹಾ ಇಬ್ಬರೂ ಪಟೌಡಿ ಕುಟುಂಬದ ರಜೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಜನರು ಅದನ್ನು ಇಷ್ಟಪಡುತ್ತಿದ್ದಾರೆ.
 
ಸೋಹಾ ಫೋಟೋವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ಕರೀನಾ, ಸೈಫ್, ತೈಮುರ್, ಸೋಹಾ, ಕುನಾಲ್ ಮತ್ತು ಇಯಾನಾ ಇದ್ದಾರೆ. ಎಲ್ಲರೂ ಪೂಲ್ ಒಂದರಲ್ಲಿದ್ದು, "ಮೇಕ್ ಅ ಸ್ಪ್ಲಾಶ್! @ಡಿಸ್ಕವರ್‌ಸೊನೆವಾ #ಫ್ಯಾಮಿಲಿಗೋಲ್ಸ್." ಎನ್ನುವ ಶೀರ್ಷಿಕೆಯ ಅಡಿ ಆ ಫೋಟೋವನ್ನು ಹಂಚಿಕೊಂಡಿದ್ದಾರೆ. ಸೋಹಾ ಇನ್ನೊಂದು ಫೋಟೋವನ್ನೂ ಸಹ ಹಂಚಿಕೊಂಡಿದ್ದು ಅದರಲ್ಲಿ ತೈಮೂರ್, ಕರೀನಾ, ಕುನಾಲ್ ಮತ್ತು ಇಯಾನಾ ಕಾಣಿಸಿಕೊಂಡಿದ್ದಾರೆ. "ಕಲರ್ ಮಿ ಹ್ಯಾಪಿ!! #ಪ್ಲೇಡೇಟ್ #DEN @ಡಿಸ್ಕವರ್‌ಸೊನೆವಾ #ಡಿಸ್ಕವರ್‌ಸೊನೆವಾ ಎನ್ನುವ ಶೀರ್ಷಿಕೆಯ ಅಡಿ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಣಿಕರ್ಣಿಕಾ ಚಿತ್ರತಂಡದಿಂದ ಹೊರನಡೆದ ನಟ ಸೋನು ಸೂದ್