Select Your Language

Notifications

webdunia
webdunia
webdunia
webdunia

ಉರ್ದು ವಿವಿಯಿಂದ ಶಾರುಖ್‌ ಖಾನ್‌ಗೆ ಗೌರವ ಡಾಕ್ಟರೇಟ್

ಉರ್ದು ವಿವಿಯಿಂದ ಶಾರುಖ್‌ ಖಾನ್‌ಗೆ ಗೌರವ ಡಾಕ್ಟರೇಟ್
Mumbai , ಭಾನುವಾರ, 25 ಡಿಸೆಂಬರ್ 2016 (10:00 IST)
ಬಾಲಿವುಡ್ ನಟ, ಕಿಂಗ್ ಖಾನ್ ಶಾರುಖ್ ಖಾನ್‌ಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ. ಇವರ ಜೊತೆಗೆ ಉರ್ದು ಭಾಷಾಭಿವೃದ್ದಿಗೆ ಸಾಕಷ್ಟು ಕೃಷಿ ಮಾಡಿರುವ ಸಂಜಯ್ ಸರಫ್ ಅವರಿಗೆ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ.
 
ಡಿಸೆಂಬರ್ 26ರಂದು ಹೈದರಾಬಾದಿನಲ್ಲಿರುವ ಮೌಲಾನಾ ಆಜಾದ್ ಉರ್ದು ವಿವಿಯಲ್ಲಿ 6ನೇ ಸ್ನಾತಕೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗೌರವ ಡಾಕ್ಟರೇಟನ್ನು ಶಾರುಖ್ ಖಾನ್, ಸಂಜಯ್ ಸರಪ್‌ರಿಗೆ ಪ್ರದಾನ ಮಾಡಲಿದ್ದಾರೆ. ರಾಷ್ಟ್ರಪತಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿವಿ ಆವರಣದಲ್ಲಿ ಬಿಗಿ ಬಂದೋಬಸ್ತ್‌ಗೆ ವ್ಯವಸ್ಥೆ ಮಾಡಲಾಗಿದೆ.
 
ಬ್ರಿಟನ್‍ನಲ್ಲಿನ ಬೆಡ್‍ಫೋರ್ಡ್ ಶೈರ್, ಎಡಿನ್‍ಬರ್ಗ್ ವಿಶ್ವವಿದ್ಯಾಲಯಗಳಿಂದ ಈಗಾಗಲೆ ಶಾರುಖ್ ಖಾನ್‌ಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ಕಳೆದ ಕೆಲ ವರ್ಷಗಳಿಂದ ಅವರು ಮಾಡುತ್ತಿರುವ ಸಾಮಾಜಿಕ ಸೇವೆ ಮತ್ತು ಚಿತ್ರಗಳಲ್ಲಿನ ಅಭಿನಯವನ್ನು ಗಮನಿಸಿ ಅವರಿಗೆ ಈ ಗೌರವ ನೀಡಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿರುಮಳೆಯಲ್ಲಿ ಶ್ರದ್ಧಾ ಕಪೂರ್‌-ಆದಿತ್ಯ ಚುಂಬನ