Select Your Language

Notifications

webdunia
webdunia
webdunia
webdunia

ಖಳನಾಯಕನಾಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಸಂಜಯ್ ದತ್

ಖಳನಾಯಕನಾಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಸಂಜಯ್ ದತ್
, ಮಂಗಳವಾರ, 12 ಜುಲೈ 2016 (08:50 IST)
ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿ ಬಳಿಕ ರಿಲೀಸ್ ಆದ ನಟ ಸಂಜಯ್ ದತ್ ಜೈಲಿನಿಂದ ಹೊರ ಬರುತ್ತಲೇ ಅವರು ಇನ್ಮೇಲೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ ಅಂತಾ ಅಭಿಮಾನಿಗಳು ಖುಷಿಯಾಗಿದ್ರು. ಆದ್ರೆ ಸಿನಿಮಾ ರಿಲೀಸ್ ಆಗಿ ತಿಂಗಳುಗಳೇ ಕಳೆದ್ರು ಸಲ್ಲು ಮಾತ್ರ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ.ಆದ್ರೀಗ ಸಲ್ಲು ನಾನು ಖಳನಾಯಕನಾಗುತ್ತಿದ್ದೇನೆ ಅಂತಿದ್ದಾರೆ.
ಹೌದು.. ಸಂಜು ಬಾಬಾ ಅಭಿಮಾನಿಗಳಿಗೆ ಕೊನೂ ಸಂತೋಷದ ಸುದ್ದಿಯೊಂದನ್ನು ನೀಡಿದ್ದಾರೆ. ಸುಭಾಷ್ ಘಾಯ್ ನಿರ್ದೇಶನ ಮಾಡುತ್ತಿರುವ ಖಳನಾಯಕ್ ರಿಟರ್ನ್ಸ್ ಸಿನಿಮಾದಲ್ಲಿ ಸಂಜಯ್ ಬಣ್ಣ ಹಚ್ಚುತ್ತಿದ್ದಾರೆ. ಅಂದ್ಹಾಗೆ ನಾವು ಖಳನಾಯಕ ಸಿನಿಮಾ ಮಾಡುವ ಬಗ್ಗೆ ಈಗಾಗಲೇ ಅಗ್ರಿಮೆಂಟ್ ಮಾಡಿಕೊಂಡಿದ್ದೇವೆ. ಸಂಜಯ್ ದತ್ ರಿಲೀಸ್ ಆಗೋ ಮುನ್ನ ಪೆರೋಲ್ ಮೇಲೆ ಹೊರ ಬಂದಾಗ ನಾನು ಅವರ ಜೊತೆ ಈ ಸಿನಿಮಾ ಮಾಡುವ ಬಗ್ಗೆ  ಮಾತನಾಡಿದ್ದೆ. ಈ ವರ್ಷ ಅಥವಾ ಮುಂದಿನ ವರ್ಷ ಸಿನಿಮಾ ಸೆಟ್ಟೇರಲಿದೆ ಅಂತಾ ಅವರು ಹೇಳಿದ್ದಾರೆ. ಅಂದ್ಹಾಗೆ ಇಪ್ಪತ್ತು ವರ್ಷ ಜೈಲಿನಲ್ಲಿ ಇದ್ದು ಬಳಿಕ ಅಲ್ಲಿಂದ ಹೊರ ಬರುವ ಬಾಲು ಪಾತ್ರವನ್ನು ಸಂಜಯ್ ದತ್ ಅವರು ನಿರ್ವಹಿಸಲಿದ್ದಾರಂತೆ.
 
ಇನ್ನು ಇದು ಬಹು ತಾರಾಗಣದ ಸಿನಿಮಾವಂತೆ. ಸಿನಿಮಾದಲ್ಲಿ ಇನ್ನು ಅನೇಕ ಮುಖಗಳು ಕಾಣಿಸಿಕೊಳ್ಳಲಿವೆಯಂತೆ.ಆದ್ರೆ ಯಾರು ಅನ್ನೋದು ಇನ್ನು ಡಿಸೈಡ್ ಆಗಿಲ್ಲ. ಈ ಹಿಂದೆ ರಿಲೀಸ್ ಆದ ಖಳನಾಯಕ ಸಿನಿಮಾದಲ್ಲಿ ಜಾಕಿಶ್ರಾಫ್ ಹಾಗೂ ಮಾಧುರಿ ದೀಕ್ಷಿತ್ ಅವರು ಕಾಣಿಸಿಕೊಂಡಿದ್ದರು.ಆ ಸಿನಿಮಾದ ಸೀಕ್ವೆಲ್ ಖಳನಾಯಕ ರಿಟರ್ನ್ಸ್. ಸಂಜಯ್ ದತ್ ಅವರ ಪಾಲಿಗೆ ಈ ಸಿನಿಮಾ ಕಮ್ ಬ್ಯಾಕ್ ಸಿನಿಮಾವಾಗಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಅಂಕಲ್ ಸಿನಿಮಾವನ್ನು ಹಾಡಿ ಹೊಗಳಿದ ಮುನ್ನಿ