Select Your Language

Notifications

webdunia
webdunia
webdunia
webdunia

ಐಶ್ವರ್ಯಾ ಸರ್ಜಾ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಧ್ವನಿ

ಐಶ್ವರ್ಯಾ ಸರ್ಜಾ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಧ್ವನಿ
ಬೆಂಗಳೂರು , ಗುರುವಾರ, 26 ಮೇ 2016 (10:34 IST)
ನಟ ಅರ್ಜುನ್ ಸರ್ಜಾ ತಮ್ಮ ಪುತ್ರಿ ಐಶ್ವರ್ಯಾ ಸರ್ಜಾ ಅವರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸೋದಕ್ಕೆ ಮುಂದಾಗಿರೋದು ಎಲ್ಲರಿಗೂ ಗೊತ್ತೇ ಇದೆ. ಅರ್ಜುನ್ ಮಗಳಿಗಾಗಿ ಪ್ರೇಮಬರಹ ನೂರು ತರಹ ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ಮಗಳ ಸಿನಿಮಾಕ್ಕೆ ಇದೀಗ ಅರ್ಜುನ್ ಸರ್ಜಾ ಅವರು ಮತ್ತಷ್ಟು ಬಣ್ಣ ತುಂಬಿದ್ದಾರೆ.
 ಹೌದು.. ಅರ್ಜುನ್ ಸರ್ಜಾ ತಾವೇ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಸಿನಿಮಾ ಪ್ರೇಮ ಬರಹ ನೂರು ತರಹ. ಇದೀಗ ಅರ್ಜುನ್ ಸಿನಿಮಾಕ್ಕೆ ಪುನೀತ್ ರಾಜ್ ಕುಮಾರ್ ಅವರ ಧ್ವನಿ ಕೊಡಿಸಿದ್ದಾರೆ. ಸಿನಿಮಾದ ಸುಂದರವಾದ ಹಾಡೊಂದನ್ನು ಅರ್ಜುನ್ ಸರ್ಜಾ ಪುನೀತ್ ರಾಜ್ ಕುಮಾರ್ ಅವರ ಕೈಯಲ್ಲಿ ಹಾಡಿಸಿದ್ದಾರೆ. ಅರ್ಜುನ್ ಸರ್ಜಾ ತಾವೇ ಖುದ್ದು ಕೇಳಿ ಪುನೀತ್ ಕೈಲಿ ಒಂದು ಹಾಡನ್ನು ಪ್ರೇಮಬರಹಕ್ಕಾಗಿ ಹಾಡಿಸ್ತಿದ್ದಾರಂತೆ. 
 
 ಅಂದ್ಹಾಗೆ ಈಗಾಗಲೇ ತಮಿಳಿನಲ್ಲಿ ಸಿನಿಮಾ ಮಾಡಿ ಅಲ್ಲಿ ಉತ್ತಮ ಹೆಸರು ಪಡೆದಿರುವ ಐಶ್ವರ್ಯಾ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾವನ್ನು ಅರ್ಜುನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಐಶ್ವರ್ಯಾ ಸರ್ಜಾ ಅವರಿಗೆ ಬಿಗ್ ಬಾಸ್ ಖ್ಯಾತಿಯ ಚಂದನ್ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಕೆಲ ವರ್ಷ ಬ್ಯುಸಿಯಾಗಿಲಿದ್ದಾರೆ ಶಿವರಾಜ್ ಕಮಾರ್