Select Your Language

Notifications

webdunia
webdunia
webdunia
webdunia

ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಪುನೀತ್ ನಟಿಸಲಿದ್ದಾರಂತೆ!

ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಪುನೀತ್ ನಟಿಸಲಿದ್ದಾರಂತೆ!
ಬೆಂಗಳೂರು , ಮಂಗಳವಾರ, 5 ಜೂನ್ 2018 (15:56 IST)
ಬೆಂಗಳೂರು : 100 ದಿನ ಪೂರೈಸಿದ ಸಂಭ್ರಮದಲ್ಲಿ ಟಗರು ಚಿತ್ರತಂಡ ಅಭಿಮಾನಿಗಳಿಗೆ ಇದೀಗ ಸಂತಸದ ಸುದ್ದಿಯೊಂದನ್ನು ನೀಡಿದೆ.


ಹ್ಯಾಟ್ರಿಕ್ ಹೀರೊ ಶಿವರಾಜ್‍ಕುಮಾರ್ ಅಭಿನಯದ `ಟಗರು' ಚಿತ್ರ ನೂರು ದಿನ ಪೂರೈಸಿ ಮತ್ತೆ ಮುನ್ನುಗ್ಗುತ್ತಿದೆ. ಆದಕಾರಣ ಶಿವರಾಜ್‍ಕುಮಾರ್ ಅಭಿಮಾನಿ ಸಂಘಗಳ ವತಿಯಿಂದ ಸಂತೋಷ್ ಚಿತ್ರಮಂದಿರದಲ್ಲಿ ನೂರನೇ ದಿನದ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು. ಟಗರು ಕಟೌಟ್‍ಗೆ ಹೂವಿನಹಾರ ಹಾಕಿ ಪಟಾಕಿ ಸಿಡಿಸಿದ ಅಭಿಮಾನಿಗಳು ಚಿತ್ರತಂಡವನ್ನ ಸಂತೋಷ್ ಚಿತ್ರಮಂದಿರಕ್ಕೆ ಬರಮಾಡಿಕೊಂಡರು.


ಈ ಸಂದರ್ಭದಲ್ಲಿ ಟಗರು ಚಿತ್ರದ ನಿರ್ದೇಶಕ ಸೂರಿ ಅವರು ಅಭಿಮಾನಿಗಳಿಗೊಂದು ಸಿಹಿಸುದ್ದಿ ನೀಡಿದ್ದಾರೆ. ಅದೆನೆಂದರೆ ಇದೇ ಚಿತ್ರ ತಂಡದಿಂದ ಟಗರು-2 ಚಿತ್ರ ನಿರ್ಮಾಣವಾಗಲಿದ್ದು, ಅದರಲ್ಲಿ ಶಿವರಾಜ್ ಕುಮಾರ್ ಅವರ ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಟಿಸಲಿದ್ದಾರೆ ಎಂದು ತಿಳಿಸಿ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಖಿ ಸಾವಂತ್ ಸನ್ನಿ ಲಿಯೋನ್ ರಲ್ಲಿ ಕ್ಷಮೆ ಕೇಳಿದ್ದು ಈ ವಿಚಾರಕ್ಕಾಗಿಯಂತೆ!